ಹುಬ್ಬಳ್ಳಿ: ಮರಾಠಾ ಪ್ರಾಧಿಕಾರ ಸ್ಥಾಪನೆ ವಿಚಾರ ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ನೀಡಿರುವ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಲಾಬುರಾಮ ಹುಬ್ಬಳ್ಳಿಯ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಹು-ಧಾ ಮಹಾನಗರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು,ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದರು.
ಈಗಾಗಲೇ ಮೂರು ಕೆ.ಎಸ್.ಆರ್.ಪಿ ತಂಡ ಹಾಗೂ 12 ಸಿಎಆರ್ ಪೊಲೀಸ್ ತಂಡಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.ಅಲ್ಲದೇ ಧಾರವಾಡದಲ್ಲಿ ರಸ್ತೆ ತಡೆದು ಬಂದ್ ಮಾಡಲು ಮುಂದಾಗಿರುವ 24 ಜನ ಪ್ರತಿಭಟನಾಕಾರರನ್ನು ಬಂಧನ ಮಾಡಲಾಗಿದೆ ಎಂದ ಅವರು, ಯಾರಾದರೂ ಕಾನೂನು ನಿಯಮ ಉಲ್ಲಂಘನೆ ಮಾಡಿದರೇ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಖಡಕ್ ಎಚ್ಚರಿಕೆ ನೀಡಿದರು.
Kshetra Samachara
05/12/2020 11:34 am