ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರಾಜ್ಯ ಬಂದ್ ಕರೆಗೆ:ಕರ್ನಾಟಕ ಸಂಗ್ರಾಮ ಸೇನೆಯ ಬೆಂಬಲವಿಲ್ಲ

ಕಲಘಟಗಿ:ಮರಾಠಾ ಪ್ರಾಧಿಕಾರ ರಚನೆ ವಿರೋಧಿಸಿ ರಾಜ್ಯ ಬಂದ್ ಕರೆಗೆ ಕರ್ನಾಟಕ ಸಂಗ್ರಾಮ ಸೇನೆಯ ಕಲಘಟಗಿ ತಾಲೂಕಾ ಘಟಕದ ಬೆಂಬಲವಿಲ್ಲ ಎಂದು ಅಧ್ಯಕ್ಷ ಸಾತಪ್ಪ ಕುಂಕೂರ ತಿಳಿಸಿದರು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಮರಾಠ ಪ್ರಾಧಿಕಾರ ರಚನೆ ಮಾಡಿ 50 ಕೋಟಿ ರೂ ಅನುದಾನ ನೀಡಿರುವದು ಸ್ವಾಗತಾರ್ಹ ಕ್ರಮವಾಗಿದೆ.ಆದರೆ ಕೆಲ ಸಂಘಟನೆಗಳು ಬಂದ್ ಗೆ ಕರೆ‌ ನೀಡಿದ್ದು,ಸಂಗ್ರಾಮ ಸೇನೆ ಬಂದ್ ಗೆ ಬೆಂಲಿಸುವುದಿಲ್ಲ ಎಂದರು.ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದ ಮರಾಠಿಗರು ಕನ್ನಡ ತಾಯಿಯ ಪುತ್ರರಾಗಿ ಕನ್ನಡ ನೆಲ,ಜಲ,ಗಡಿ ವಿಷಯ ಬಂದಾಗ ಕನ್ನಡ ನಾಡಿನ‌ ಬೆಂಬಲಕ್ಕೆ ನಿಂತಿದ್ದೇವೆ ಕಾರಣ ಯಾವುದೇ ಕಾರಣಕ್ಕೂ ಬಂದ್ ಗೆ ಬೆಂಬಲ‌ ಇಲ್ಲ ಎಂದು ಸ್ಪಷ್ಟಪಡಿಸಿದರು‌.

ಈ ಸಂದರ್ಭದಲ್ಲಿ ‌ಬೂದಪ್ಪ ಲಮಾಣಿ,ಮುದಕಪ್ಪ ಹಟಕಿನಾಳ,ಶಿವಬಸಪ್ಪ ಕಲಕಟ್ಟಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

24/11/2020 10:06 pm

Cinque Terre

20.1 K

Cinque Terre

1

ಸಂಬಂಧಿತ ಸುದ್ದಿ