ನವಲಗುಂದ : ಡಾ. ರಾಜಕುಮಾರ ಅಭಿಮಾನಿ ಬಳಗದ ವತಿಯಿಂದ ನವಲಗುಂದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಗುರುವಾರ ಪಟ್ಟಣದ ಲಿಂಗರಾಜ್ ವೃತ್ತದಲ್ಲಿರುವ ರಾಜ್ ಭವನದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು...
ಇನ್ನೂ ಈ ವೇಳೆ ಅಧ್ಯಕ್ಷರಾದ ಮಂಜುನಾಥ ಜಾದವ, ಉಪಾಧ್ಯಕ್ಷರಾದ ಖ್ಯೆರುನಬಿ ನಾಶಿಪುಡಿ, ಪುರಸಭೆಯ ವಿರೋಧ ಪಕ್ಷದ ನಾಯಕರಾದ ಅಪ್ಪಣ್ಣ ಹಳ್ಳದ ಅವರಿಗೆ ಶಾಲು ಹೊಚ್ಚಿ, ಹೂ ಹಣ್ಣು ನೀಡಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಶಂಕರಣ್ಣ ಧಾರವಾಡ ಮತ್ತು ಡಾ.ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷ ನೇತಾಜಿ ಕಲಾಲ್ ಉಪಾಧ್ಯಕ್ಷ ನಭಿ ನದಾಫ್ ಸೇರಿದಂತೆ ಸದಸ್ಯರು ಭಾಗಿಯಾಗಿದ್ದರು...
Kshetra Samachara
12/11/2020 10:02 pm