ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎರಡನೇ ಬಾರಿ ಆಯ್ಕೆಯಾದ ಸಂಕನೂರ

ಧಾರವಾಡ: ಪಶ್ಚಿಮ ಪದವೀಧರರ ಕ್ಷೇತ್ರದಿಂದ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಅವರಿಗೆ ಮತ್ತೊಂದು ಬಾರಿ ಪದವೀಧರರು ಜೈ ಎಂದಿದ್ದಾರೆ.

ನಾಲ್ಕನೇ ಹಾಗೂ ಕೊನೆಯ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಅವರ ಗೆಲುವನ್ನು ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಅಧೀಕೃತವಾಗಿ ಘೋಷಣೆ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಅವರು 23857 ಮತಗಳನ್ನು ಪಡೆದು ಗೆದ್ದು ಬೀಗಿದರು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಆರ್.ಎಂ.ಕುಬೇರಪ್ಪ ಅವರು 12448 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಇನ್ನು ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರು 6188 ಮತಗಳನ್ನಷ್ಟೇ ಪಡೆಯುವಲ್ಲಿ ಶಕ್ತರಾದರು.

ಈ ಚುನಾವಣೆಯಲ್ಲಿ ಒಟ್ಟು 52041 ಮತಗಳು ಚಲಾವಣೆಯಾಗಿದ್ದವು. 43269 ಸಿಂಧು ಮತಗಳಾಗಿದ್ದರೆ, 8772 ಮತಗಳು ಅಸಿಂಧುವಾಗಿದ್ದವು.

Edited By : Nirmala Aralikatti
Kshetra Samachara

Kshetra Samachara

10/11/2020 07:58 pm

Cinque Terre

63.26 K

Cinque Terre

22

ಸಂಬಂಧಿತ ಸುದ್ದಿ