ಕುಂದಗೋಳ : ನೂತನ ಕೃಷಿ ಇಲಾಖೆ ಕಟ್ಟಡಗಳನ್ನು ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ ಬೀಜ ಗೊಬ್ಬರ ವಿತರಣೆ ಮತ್ತು ಸಂಗ್ರಹಣೆಗೆ ರೈತ ಸಂಪರ್ಕ ಕೇಂದ್ರ ಹಾಗೂ ಇಲಾಖೆ ಅಧಿಕಾರಿಗಳಿಗೆ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಅನುಕೂಲವಾಗಲಿದೆ ಎಂದರು.
ಕೃಷಿ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಗೆ ಸಿಎಂ ಆಶ್ವಾಸನೆ ಕೊಟ್ಟಿದ್ದಾರೆ ಅವುಗಳನ್ನು ಭರ್ತಿ ಮಾಡುತ್ತೇವೆ, ಕೃಷಿ ಕಾಯಕ ಮಿತ್ರ ಹುದ್ದೆಗಾಗಿ ಡಿಪ್ಲೋಮಾ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ಕೋವಿಡ್ ಸಂದರ್ಭದಲ್ಲಿ ಸರಿಯಲ್ಲ ನೇಮಕಾತಿ ಬಗ್ಗೆ ಪ್ರಕ್ರಿಯೆ ಕೈಗೊಳ್ಳತ್ತೆವೆ ಶೇ.50 ನೇಮಕಾತಿಗೆ ಮುಖ್ಯಮಂತ್ರಿ ಆದೇಶ ಮಾಡಿದ್ದಾರೆ ಎಂದರು, ಕುಂದಗೋಳ ತಾಲೂಕು
ಮೆಣಸಿನಕಾಯಿ ಬೆಳೆಗೆ ಹೆಸರುವಾಸಿ ಇಲ್ಲೋಂದು ಕೋಲ್ಡ್ ಸ್ಟೋರೇಜ್ ಅಗತ್ಯವಿದೆ ಶೀಘ್ರ ಅದನ್ನು ಮಂಜೂರು ಮಾಡುತ್ತೇವೆ ಬೆಣ್ಣೆ ಹಳ್ಳದ ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ಬಿಡುಗಡೆಗೆ ಅಧಿಕಾರಿಗಳಿಗೆ ಸೂಚಿಸುತ್ತೇನೆಂದರು.
ರೈತರಿಗೆ ಬೆಳೆ ವಿಮೆ ತಲುಪಿಲ್ಲ ಸಮರ್ಪಕ ಉತ್ತರ ಅಧಿಕಾರಿಗಳು ನೀಡುತ್ತಿಲ್ಲಾ ಇನ್ಸೂರೆನ್ಸ್ ಕಂಪನಿಯೂ ಕೊಡುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಬೆಳೆ ಸರ್ವೇ ಆಧಾರದ ಮೇಲೆ ಬೆಳೆ ನಷ್ಟವಾಗಿದ್ದರೇ ಹಣ ಬಿಡುಗಡೆ ಮಾಡುತ್ತೇವೆ ಎಂದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನಗರಗಳಿಗೂ ವಿಸ್ತರಿಸಬೇಕೆಂಬ ಪ್ರಶ್ನೇ ಬಂದಿದೆ ಮುಂದಿನ ದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
Kshetra Samachara
01/10/2021 02:10 pm