ಧಾರವಾಡ : ತಾಲೂಕಿನ ರಾಗಿ ಕಲ್ಲಾಪುರ ಗ್ರಾಮವನ್ನು ಕಂದಾಯ ಗ್ರಾಮವೆಂದು ಘೋಷಣೆ ಮಾಡುವಂತೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತರು ಪ್ರತಿಭಟನೆ ನಡೆಸಿದರು.
ಭೂಸ್ವಾಧೀನ ಕಾಯ್ದೆ ಮತ್ತು ಭೂ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು.ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ ಹಿಂಪಡೆಬೇಕು.ಬೀಜ ಮಸೂದೆ ತಿದ್ದುಪಡಿ ಕಾಯ್ದೆ ಮತ್ತು ಅಗತ್ಯ ವಸ್ತುಗಳ ಕಾಯ್ದೆ,ವಿದ್ಯತ್ ಚ್ಛಕ್ತಿ ಕಾಯ್ದೆ ಹಿಂಪಡೆಬೇಕು.
ರೈತರ ಕೃಷಿ ಕಾರ್ಮಿಕರ ಸ್ತ್ರೀಶಕ್ತಿ ಕೃಷಿ ರಾಷ್ಟ್ರೀಕೃತ ಸಾಲ ಮನ್ನಾ ಸೇರಿ,ನೈಸರ್ಗಿಕ ವಿಪತ್ತುಗಳಿಗೆ ತುತ್ತಾಗಿರುವ ರೈತರಿಗೆ ಸಕಾಲಕ್ಕೆ ಪರಿಹಾರ ಒದಗಿಸಬೇಕು.
ಧಾರವಾಡ ಜಿಲ್ಲೆಯ ಹೊಲ್ತಿಕೊಟ್ಟಿ,ನಾಗಲಾವಿ,ಕುಂಬಾರಕೊಪ್ಪ,ಅರವಟಗಿ ಗ್ರಾಮಗಳ ಪತ್ತಿನ ಸಹಕಾರದ ಅಡಿಯಲ್ಲಿರುವ ರೈತರ ಜಮೀನನ್ನು ರೈತರಿಗೆ ಊಳುವವನೆ ಒಡೆಯ ಕಾಯಿದೆಯಡಿಯಲ್ಲಿ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಜಿಲ್ಲಾಧ್ಯಕ್ಷ ರವಿರಾಜ ಕಂಬಳಿ,ಎ.ಎಚ್.ಕುಂದಾಬೈನವರ.ಸೇರಿದಂತೆ ರೈತರು ಇದ್ದರು.
Kshetra Samachara
26/11/2020 06:11 pm