ಧಾರವಾಡ: ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡು ಇಂದು ನಡೆದ ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಶೇ.70.11 ರಷ್ಟು ಮತದಾನ ನಡೆದಿದೆ.
ಧಾರವಾಡ ಜಿಲ್ಲೆಯಲ್ಲಿ ಶೇ.68.65 ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇ.67.89 ರಷ್ಟು, ಗದಗ ಜಿಲ್ಲೆಯಲ್ಲಿ ಶೇ.74.59 ರಷ್ಟು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.71.08 ರಷ್ಟು ಮತದಾನವಾಗಿದೆ. ಗದಗ ಜಿಲ್ಲೆಯಲ್ಲೇ ಅತೀ ಹೆಚ್ಚು ಮತದಾನವಾದಂತಾಗಿದೆ.
ಧಾರವಾಡ ಜಿಲ್ಲೆಯಲ್ಲಿ 13,282 ಪುರುಷ ಮತದಾರರಿದ್ದರೆ ಆ ಪೈಕಿ 9,867 ಜನ ಮತದಾನ ಮಾಡಿದ್ದಾರೆ. 8,263 ಜನ ಮಹಿಳಾ ಮತದಾರರಿದ್ದರೆ ಆ ಪೈಕಿ 4,926 ಜನ ಮತದಾನ ಮಾಡಿದ್ದಾರೆ. ಇತರೆ 4 ಜನ ಮತದಾರರಿದ್ದರೆ ಅವರಾರೂ ಮತದಾನ ಮಾಡಿಲ್ಲ. ಒಟ್ಟು 21,549 ಜನ ಮತದಾರರ ಪೈಕಿ 14,793 ಜನ ಮತದಾನ ಮಾಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ 16,220 ಜನ ಪುರುಷ ಮತದಾರರಿದ್ದರೆ ಆ ಪೈಕಿ 11,699 ಜನ ಮತದಾನ ಮಾಡಿದ್ದರೆ, 7,378 ಮಹಿಳಾ ಮತದಾರರ ಪೈಕಿ 4,324 ಜನ ಹಕ್ಕು ಚಲಾಯಿಸಿದ್ದಾರೆ. ಇತರೆ 5 ಜನ ಇದ್ದರೆ ಇವರಾರೂ ಮತದಾನ ಮಾಡಿಲ್ಲ. ಒಟ್ಟಾರೆ 23,603 ಜನ ಮತದಾರರ ಪೈಕಿ ಹಾವೇರಿ ಜಿಲ್ಲೆಯಲ್ಲಿ 16,023 ಜನ ಮತದಾನ ಮಾಡಿದ್ದಾರೆ.
ಗದಗ ಜಿಲ್ಲೆಯಲ್ಲಿ 10,979 ಜನ ಪುರುಷ ಮತದಾರರಿದ್ದರೆ ಆ ಪೈಕಿ 8,579 ಜನ ಮತದಾನ ಮಾಡಿದ್ದರೆ, ಒಟ್ಟು 4,998 ಜನ ಮಹಿಳಾ ಮತದಾರರ ಪೈಕಿ 3,339 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿಯೂ ಇತರೆ ಒಬ್ಬರು ಮತದಾರರಿದ್ದು, ಅವರೂ ಮತ ಚಲಾವಣೆ ಮಾಡಿಲ್ಲ.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ 7,113 ಜನ ಪುರುಷ ಮತದಾರರಿದ್ದು, ಈ ಪೈಕಿ 5,519 ಜನ ಮತದಾನ ಮಾಡಿದ್ದಾರೆ. 6,034 ಮಹಿಳಾ ಮತದಾರರ ಪೈಕಿ 3,826 ಜನ ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಇತರೆ ಒಬ್ಬರು ಮತದಾರರಿದ್ದು, ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಜಿಲ್ಲೆಯ ಒಟ್ಟು 13,148 ಮತದಾರರ ಪೈಕಿ 9,346 ಜನ ಮತದಾನ ಮಾಡಿದ್ದಾರೆ.
ನಾಲ್ಕೂ ಜಿಲ್ಲೆ ಸೇರಿದಂತೆ 35,664 ಜನ ಪುರುಷರು, 16,415 ಮಹಿಳಾ ಮತದಾರರು ಹಾಗೂ ಇತರೆ ಒಬ್ಬರು ಸೇರಿದಂತೆ ಒಟ್ಟು 74,278 ಮತದಾರರ ಪೈಕಿ 52,080 ಮತದಾರರು ಮತದಾನ ಮಾಡಿದ್ದಾರೆ.
Kshetra Samachara
28/10/2020 07:37 pm