ಅಣ್ಣಿಗೇರಿ: ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಹಿಂದೂ ಮುಸ್ಲಿಂ ಒಂದಾಗಿ ಆಚರಿಸಿಕೊಳ್ಳುತ್ತಾ ಬಂದಿರುವ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಹಬ್ಬವು ಪ್ರವಾದಿ ಪೈಗಂಬರರ ದಿನಾಚರಣೆಯನ್ನು ಆಚರಿಸಲಾಯಿತು.ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ದಾಸೋಹ ಮಠದ ಶಿವಕುಮಾರ ಶ್ರೀಗಳು ಪೈಗಂಬರ ದಿನಾಚರಣೆ ಮತ್ತು ಶೀಗಿ ಹುಣ್ಣಿಮೆ ವಾಲ್ಮೀಕಿ ಜಯಂತಿ ಈ ಮೂರು ಹಬ್ಬಗಳು ಒಟ್ಟುಗೂಡಿ ಬಂದಿದ್ದು ಖುಷಿಯಿಂದ ಎಲ್ಲರೂ ಹಬ್ಬಗಳನ್ನು ಆಚರಿಸಬೇಕೆಂದು ಹೇಳಿದರು.
ಈ ವೇಳೆ ಕಮಲಾಪೂರ್ ದರ್ಗಾದ ಸೈಯದ್ ಸಜ್ಜಾದ ಗುರುಗಳು, ದಾಸೋಹ ಮಠದ ಶಿವಕುಮಾರ ಶ್ರೀಗಳು, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಪ್ರಕಾಶ ಅಂಗಡಿ, ಷಣ್ಮುಖ ಗುರಿಕಾರ, ವಿನೋದ ಅಸೂಟಿ, ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಪಟ್ಟಣದ ಹಿಂದೂ-ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
Kshetra Samachara
09/10/2022 11:25 pm