ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪತ್ರಕರ್ತ ವೀರೇಶ್ ಡಬರಿ ನಿಧನ

ಅಣ್ಣಿಗೇರಿ: ಅದಿಕವಿ ಪಂಪ ನಗರದ ನಿವಾಸಿ ವೀರೇಶ್ ಹನುಮಂತಪ್ಪ ಡಬರಿ (45) ಅನಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರ ನಿಧನರಾದರು.ಅವರಿಗೆ ತಂದೆ, ತಾಯಿ, ಸಹೋದರಿ, ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ.

ಪ್ರಸ್ತುತ ನಾಗರಿಕ ಪತ್ರಿಕೆಯ ಅಣ್ಣಿಗೇರಿ ತಾಲೂಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಹಿಂದೆ ಹಲವಾರು ಪತ್ರಿಕೆಗಳಲ್ಲಿ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.ವೀರೇಶ್ ಡಬರಿ ಅವರ ನಿಧನಕ್ಕೆ ಅಣ್ಣಿಗೇರಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಶೋಕ ವ್ಯಕ್ತಪಡಿಸಿದೆ.

Edited By : PublicNext Desk
Kshetra Samachara

Kshetra Samachara

30/09/2022 08:06 pm

Cinque Terre

11.51 K

Cinque Terre

1

ಸಂಬಂಧಿತ ಸುದ್ದಿ