ಅಣ್ಣಿಗೇರಿ: ಶಿಶ್ವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆನ್ನೂರು ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಯೋಜನೆ ವತಿಯಿಂದ 358 ನೇ ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಕೆರೆ ನಿರ್ಮಾಣವಾಗಿದ್ದು, ಆದರ ಹಸ್ತಾಂತರ ಮತ್ತು ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಜರುಗಿತು.
ಇದೇ ವೇಳೆ ಕೆರೆಯ ದಡದ ಮೇಲೆ ಸಸಿ ಕೂಡ ನಡೆಯಲಾಯಿತು.ಈ ವೇಳೆ ಧರ್ಮಸ್ಥಳ ಸಂಘದ ಅಧಿಕಾರಿಗಳಾದಗಣೇಶ್ ಬಿ, ಯೋಗೀಶ, ಅತಿಥಿಗಳಾದ ವಿ.ಡಿ. ಅಂದಾನಿಗೌಡ್ರ, ಈರಪ್ಪ ನಾಯ್ಕರ್, ಪ್ರಕಾಶ್ ಅಂಗಡಿ, ಚೆನ್ನವ್ವ ಕಾಳಿ, ಲಕ್ಷ್ಮವ್ವ ವಾಲಿಕಾರ್ ಎನ್. ಎಚ್. ಪಾಟೀಲ್ ಮಂಜುನಾಥ್ ಸೇರಿದಂತೆ ಧರ್ಮಸ್ಥಳ ಸಂಘದ ಮಹಿಳಾ ಪ್ರತಿನಿಧಿಗಳು ಹಾಗೂ ಬೆನ್ನೂರು ಗ್ರಾಮದ ಗುರು ಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
23/09/2022 03:05 pm