ಅಣ್ಣಿಗೇರಿ: ಧಾರಕಾರವಾಗಿ ಸುರಿದ ಮಳೆಯ ಆರ್ಭಟಕ್ಕೆ ಪಟ್ಟಣದ ಹೊರವಲಯದಲ್ಲಿರುವ ಪೆಟ್ರೋಲ್ ಪಂಪ್ ಗೆ ಭಾರಿ ಪ್ರಮಾಣದ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಂಗಳವಾರ ಯಾವುದೇ ವಾಹನ ಸವಾರಿಗೆ ಡೀಸೆಲ್-ಪೆಟ್ರೋಲ್ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಬಂದೊದಗಿತ್ತು.
ಇಂದು ಪೆಟ್ರೋಲ್ ಬಂಕುಗಳು ಮುಂದೆ ಗಾಡಿಗಳು ಸಾಲುಗಟ್ಟಿ ನಿಂತು ತಮ್ಮ ವಾಹನಗಳಿಗೆ ಡೀಸೆಲ್ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾರೆ. ಇನ್ನೂ ಈ ಮಳೆರಾಯನ ಆರ್ಭಟ ಕ್ಕೆ ಬರುವ ದಿನಗಳಲ್ಲಿ ಯಾವೆಲ್ಲ ಅನಾಹುತಗಳು ಸಂಭವಿಸುತ್ತಿವೆ ಎಂಬುದು ನೋಡಬೇಕಾಗಿದೆ.
Kshetra Samachara
07/09/2022 01:14 pm