ಹುಬ್ಬಳ್ಳಿ: ಉಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಹಾಗೂ ಅಧ್ಯಕ್ಷರ ಆಯ್ಕೆಯು ಉಣಕಲ್‌ನ ಹಿರಿಯರಾದ ಶಿವು ಪಾಟೀಲ್ ಹಾಗೂ ರಮೇಶ್ ಕಾಂಬಳೆ ಅವರ ಮಧ್ಯಸ್ಥಿಕೆಯಲ್ಲಿ ಅವಿರೋಧವಾಗಿ ನಡೆಯಿತು.
ಯಲ್ಲಪ್ಪ ಕಡಪಟ್ಟಿ ಅವರು ಅಧ್ಯಕ್ಷರಾಗಿ ನೇಮಕಗೊಂಡರೆ, ನಿರ್ದೇಶಕರಾಗಿ ರಾಯನಗೌಡ ಶಟ್ಟಿನಗೌಡ್ರ, ಶಿವಾಜಿ ಕನ್ನಿಕೊಪ್ಪ, ಗುರುನಗೌಡ ಕೆಂಚನಗೌಡ್ರ, ನಾಗರಾಜ ನವಲಗುಂದ, ಶೇಖಪ್ಪ ಮೆಣಸಿನಕಾಯಿ, ಸುರೇಶ ಬಾಗಮ್ಮನವರ, ರವಿಸಿಂಗ್ ಹಜೇರಿ, ಗುರುರಾಜ ಸೂರ್ಯವಂಶಿ, ನಿಂಗವ್ವ ಹಿರೇಮಠ, ಸುಶೀಲವ್ವ ಧಾರವಾಡ ಆಯ್ಕೆಯಾದರು. ಈ ಸಂದರ್ಭದಲ್ಲಿ ಅಶೋಕ್ ಚಿಲ್ಲಣ್ಣವರ, ಸಿದ್ದು ಮಾಯಣ್ಣವರ,ಮಂಜುನಾಥ ಹೊಸಮನಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
Kshetra Samachara
20/07/2022 05:47 pm