ಕಲಘಟಗಿ : ಕಲಘಟಗಿ ಪಟ್ಟಣದ ಪಶು ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದಿರುವುದಕ್ಕೆ ಆಕಳೊಂದು ಅಸುನೀಗಿರುವ ಘಟನೆ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದಲ್ಲಿ ನಡೆದಿದೆ.
ದೇವರ ಹೆಸರಿನಲ್ಲಿ ಬಿಟ್ಟ ಆಕಳೊಂದು ಹಸು ಹಾಕುವ ಸಂದರ್ಭದಲ್ಲಿ ತೀವ್ರ ನೋವಿನಂದ ಒದ್ದಾಡುವುದನ್ನು ಕಂಡ ಗ್ರಾಮಸ್ಥರು ಕೂಡಲೇ ಪಶುವೈದ್ಯರಿಗೆ ಕರೆ ಮಾಡಿದ್ದಾರೆ.
ಆದರೆ ವೈದ್ಯರು ಸೂಕ್ತ ಸಮಯಕ್ಕೆ ಸ್ಥಳಕ್ಕೆ ಆಗಮಿಸದಿರುವುದಕ್ಕೆ ಆಕಳು ಮೃತಪಟ್ಟಿದೆ. ಇನ್ನು ವೈದ್ಯರ ನಿರ್ಲಕ್ಷ್ಯದಿಂದಲೇ ಆಕಳು ಮೃತಪಟ್ಟಿದೆ ಎಂದು ಸಾರ್ವಜನಿಕರು ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
22/05/2022 09:28 am