ನವಲಗುಂದ : ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆಗೆ ಈಗಾಗಲೇ ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳು ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ನವಲಗುಂದದಲ್ಲೂ ಕರ್ನಾಟಕ ರಕ್ಷಣಾ ವೇದಿಕೆ ಎಚ್ ಶಿವರಾಮೇಗೌಡರ ಬಣದಿಂದ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ವೀರಣ ಪೂಜಾರ ನೇತೃತ್ವದಲ್ಲಿ ಪಟ್ಟಣದ ಗಾಂಧೀ ಮಾರುಕಟ್ಟೆಯಲ್ಲಿನ ಸಂಗೋಳ್ಳಿ ರಾಯಣ ಪ್ರತಿಮಗೆ ಮಾಲಾರ್ಪಣೆ ಮಾಡಿ, ಲಿಂಗರಾಜ ವೃತ್ತದಲ್ಲಿ ರಾಷ್ಟ್ರಿಯ ಹೆದ್ದಾರಿ ತಡೆದು ಎಂಇಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ ಹೋರಾಟಗಾರರು, ಪುಂಡಾಟಿಕೆ ತೋರಿದ ಎಂಇಎಸ್ ಮತ್ತು ಶಿವಸೇನೆ ಸಂಘಟನೆಯನ್ನು ಕರ್ನಾಟಕದಲ್ಲಿ ರದ್ದುಗೊಳಿಸಿ, ಅವರನ್ನು ಗಡಿಪಾರು ಮಾಡಬೇಕು ಎಂದು ತಹಶೀಲ್ದಾರರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
Kshetra Samachara
20/12/2021 11:09 pm