ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಕ್ಕಳಿಗೆ ಪಾಠ ಮಾಡಿದ್ರೂ ಜಿಪಂ ಸಿಇಓ ಡಾ.ಸುಶೀಲಾ

ಕುಂದಗೋಳ : ತಾಲೂಕಿನ ಅಲ್ಲಾಪೂರ, ಶಿರೂರು, ಕಮಡೊಳ್ಳಿ, ಪಶುಪತಿಹಾಳ ಗ್ರಾಮಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಭೇಟಿ ನೀಡಿ 15ನೇ ಹಣಕಾಸು ಹಾಗೂ ಅನಿರ್ಬಂಧಿತ ಅನುದಾನದ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಅಲ್ಲಾಪೂರ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಮಕ್ಕಳೊಡನೆ ಮಗುವಾದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಅವರು ಮಕ್ಕಳಿಗೆ ಮಗ್ಗಿ ಕೇಳಿ ಭವಿಷ್ಯದಲ್ಲಿ ಏನಾಗುತ್ತಿರಿ ಎಂದು ಕೇಳಿ ಲೆಕ್ಕ ಬಿಡಿಸಲು ಸೂಚಿಸಿದರು.

ಬಳಿಕ ಅಲ್ಲಾಪೂರ ಗ್ರಾಮದ ಸಂಪೂರ್ಣ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಗ್ರಾಮದ ಜನರಿಗೆ ವ್ಯಾಕ್ಸಿನ್ ಪಡೆಯುವಂತೆ ಸಲಹೆ ನೀಡಿ, ಅಲ್ಲಾಪೂರ ಗ್ರಾಮದ ಕೆರೆಗೆ ಸಮಗ್ರ ಅಭಿವೃದ್ಧಿ ಯೋಜನೆ ನೀಡುವ ಭರವಸೆ ನೀಡಿದರು. ಅಂಗನವಾಡಿಯ ಆಟೋಟದ ಪರಿಕರಗಳನ್ನು ನೋಡಿ ಖುಷಿ ಪಟ್ಟರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ್ ಕುರಿಯವರ, ಪಿಡಿಓ ಬಸವರಾಜ ಕುರಣಿ ಇತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

14/12/2021 08:41 pm

Cinque Terre

76.81 K

Cinque Terre

2

ಸಂಬಂಧಿತ ಸುದ್ದಿ