ಧಾರವಾಡ: ಸೇನಾ ಹೆಲಿಕಾಪ್ಟರ್ ಪಥನಗೊಂಡು ಈ ದುರಂತದಲ್ಲಿ ಅಸುಗೀನಿದ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರಿಗೆ ದೇಶದೆಲ್ಲೆಡೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.
ಅದರಂತೆ ವಿದ್ಯಾಕಾಶಿ ಧಾರವಾಡದಲ್ಲೂ ವಿವಿಧ ಸಂಘ, ಸಂಸ್ಥೆ ಹಾಗೂ ವಿವಿಧ ರಾಜಕೀಯ ಪಕ್ಷಗಳಿಂದಲೂ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಜಯ ಕರ್ನಾಟಕ ಸಂಘಟನೆ ಹಾಗೂ
ಸ್ವಯಂ ಶಕ್ತಿ ಸಮಗ್ರ ಅಭಿವೃದ್ಧಿ ಸಂಸ್ಥೆಯ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸ್ವಯಂ ಶಕ್ತಿ ಸಮಗ್ರ ಅಭಿವೃದ್ಧಿ ಸಂಸ್ಥೆಯ ಸದಸ್ಯರು ಧಾರವಾಡದ ಬಾರಾಕೊಟ್ರಿಯಲ್ಲಿ ರಾವತ್ ಅವರ ಭಾವಚಿತ್ರದ ಮುಂದೆ ಮೊಂಬತ್ತಿ ಬೆಳಗಿ, ಮೌನಾಚರಣೆ ಮಾಡಿ ಭಾರತಾಂಬೆಯ ಹೆಮ್ಮೆಯ ಪುತ್ರ ಬಿಪಿನ್ ರಾವತ್ ಅವರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಅಭಿವೃದ್ಧಿ ನಿಗಮ ನಿರ್ದೇಶಕ ಶರಣು ಅಂಗಡಿ ಅವರ ನೇತೃತ್ವದಲ್ಲಿ ಈ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Kshetra Samachara
08/12/2021 10:19 pm