ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗೂಗಲ್ ಮ್ಯಾಪ್ ನೋಡುತ್ತ ಗುಂಡಿಗೆ ಬಿದ್ದ ಆಯಿಲ್ ಟ್ಯಾಂಕರ್

ಹುಬ್ಬಳ್ಳಿ: ಗೂಗಲ್‌ ಮ್ಯಾಪ್ ನೊಡಿಕೊಂಡು ಮುಂಬೈನಿಂದ ಬಳ್ಳಾರಿಗೆ ಹೊರಟಿದ್ದ ಆಯಿಲ್ ಟ್ಯಾಂಕರ್ ವಾಹನವೊಂದು ತಪ್ಪು ಮಾಹಿತಿಯಿಂದ ಬೇರೆ ದಾರಿಯಲ್ಲಿ ಬಂದು ಮಾರ್ಗಮಧ್ಯದಲ್ಲಿ ಸಿಲುಕಿಕೊಂಡು ಪರದಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹೌದು...ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಹೀಗಾಗಿ ಗದಗ ರಸ್ತೆಗೆ ಹೋಗ ಬೇಕಿದ್ದ ಕ್ಯಾಂಟರ್ ವಾಹನ ಗೂಗಲ್ ಮ್ಯಾಪ್ ನೊಡಿಕೊಂಡು ನಗರದ ದೇಶಪಾಂಡೆ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಬ್ರಿಡ್ಜ್ ಬಳಿ ಬಂದಿದೆ. ಹೊಸ್ ಬ್ರಿಡ್ಜ್ ನಿಂದ ಭವಾನಿ ನಗರಕ್ಕೆ ಹೊರಟಿದ್ದ ಆಯಿಲ್ ತುಂಬಿಕೊಂಡಿರುವ ವಾಹನ ಆಕೃತಿ ಅಪಾರ್ಟ್ ಮೆಂಟ್ ನ ಹಿಂಭಾಗದಲ್ಲಿ ಮಣ್ಣಿನಲ್ಲಿ ಸಿಲುಕಿಕೊಂಡಿದ್ದು, ವಾಹನ ಚಾಲಕ ಹಾಗೂ ಕ್ಲೀನರ್ ಪರದಾಡುವಂತಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ ಐದು ಗಂಟೆಯಿಂದ ಕ್ಯಾಂಟರ್ ವಾಹನ ಸಿಲುಕಿಕೊಂಡಿದೆ. ಎಷ್ಟೇ ಪ್ರಯತ್ನ ಪಟ್ಟರು ಕೂಡ ವಾಹನ ಹೊರ ಬರುತ್ತಿಲ್ಲ. ಟ್ಯಾಂಕರ್ ಚಕ್ರಗಳು ಸಿಲುಕಿಕೊಂಡಿದ್ದು, ಜೆಸಿಬಿಯಿಂದ ಹೊರ‌ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಎಲ್ಲ ಪ್ರಯತ್ನಗಳು ವಿಫಲವಾಗಿದ್ದು, ಕ್ರೇನ್ ಮುಖಾಂತರ ವಾಹನವನ್ನು ಹೊರ ತೆಗೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ‌.

Edited By : Nagesh Gaonkar
Kshetra Samachara

Kshetra Samachara

19/11/2021 07:26 pm

Cinque Terre

76.26 K

Cinque Terre

2

ಸಂಬಂಧಿತ ಸುದ್ದಿ