ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸಾರ್ವಜನಿಕರಿಗೆ ಕುತೂಹಲ ಕೆರಳಿಸಿದ ಚಿಟಗುಪ್ಪಿಯಲ್ಲಿನ ಬ್ರಿಟಿಷರ ಲಾಕರ್

ವರದಿ: ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

ಹುಬ್ಬಳ್ಳಿ : ಇತಿಹಾಸ ಪ್ರತಿದ್ದ ಚಿಟಗುಪ್ಪಿ ಆಸ್ಪತ್ರೆಯು ಶಿಥಿಲಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ, ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ. ಇದರ ಬೆನ್ನಲ್ಲೇ ಆಸ್ಪತ್ರೆಯ ಗೋಡೆಯಲ್ಲಿ ಒಂದು ಲಾಕರ್ ಪತ್ತೆಯಾಗಿದ್ದು, ಇದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಸುದೀರ್ಘ 127 ವರ್ಷದ ಈ ಕಟ್ಟಡ, ಬ್ರಿಟಿಷ್ ರ ಕಾಲದಾಗಿದ್ದು, ರಾವ್ ಬಹದ್ದೂರ್ ಶ್ರೀನಿವಾಸ ಬಾಲಾಜಿ ಚಿಟಗುಪ್ಪಿ ಅವರು ಜನರಿಗೆ ಅನುಕೂಲವಾಗಲೆಂದು ಔಷಧಾಲಯ ಎಂಬ ಹೆಸರಿನಲ್ಲಿ ಪ್ರಾರಂಭಿಸಿದ್ದರು. ನಂತರ 1936 ರಲ್ಲಿ ಅದು ಆಸ್ಪತ್ರೆಯಾಗಿ ಬದಲಾಗಿರುವುದು ಇತಿಹಾಸವಾಗಿದೆ.

ಆದರೆ ಇದೀಗ ಈ ಪುರಾತನ ಕಟ್ಟಡ ದಲ್ಲಿ ಅಂದಿನಿಂದ ಇಂದಿನವರೆಗೆ ಲಕ್ಷಾಂತರ ರೋಗಿಗಳಿಗೆ ಆರೈಕೆ ಮಾಡಲಾಗಿದೆ. ಈ ದಿಸೆಯಲ್ಲಿ ಕಟ್ಟಡದಲ್ಲಿ ಲಾಕರ್ ಪತ್ತೆಯಾದ ಬೆನ್ನಲ್ಲೇ ಅದರಲ್ಲಿ ಪ್ರಾಚೀನ ಔಷಧಿಗಳಿಗೆ ಸಂಬಂಧಿಸಿದ ವಸ್ತುಗಳು, ಇಲ್ಲವೆ ನಗ, ನಾಣ್ಯಗಳಿವೆಯೋ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಮಾತನಾಡಿಸಿದರೇ ಲಾಕರ್ ತುಂಬಾ ಹಳೆಯದ್ದು, ಅದರ ಕೀಲಿಯೂ ಇಲ್ಲ. ನಾವು ಅದನ್ನು ತೆಗೆದು ಇಲ್ಲ ಎಂದು ಹೇಳುತ್ತಿದ್ದಾರೆ.

ಈ ನಿಟ್ಟಿನಲ್ಲಿ ಈ ಲಾಕರ್ ನ್ನು ಜಿಲ್ಲಾಧಿಕಾರಿಗಳು, ಪುರಾತತ್ವ ಇಲಾಖೆಯ ಅಧಿಕಾರಿ ಸೇರಿದಂತೆ ಮೇಲಾಧಿಕಾರಿಗಳ ಸಮ್ಮುಖದಲ್ಲಿ ತೆರೆದು ಲಾಕರ್ ನಲ್ಲಿ ಏನಿದೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಬೇಕೆಂಬುದು ಜನರ ಆಶಯವಾಗಿದೆ.

Edited By : Nagesh Gaonkar
Kshetra Samachara

Kshetra Samachara

12/11/2021 10:05 pm

Cinque Terre

41.04 K

Cinque Terre

4

ಸಂಬಂಧಿತ ಸುದ್ದಿ