ನವಲಗುಂದ: ತಾಲ್ಲೂಕಿನ ಕರ್ಲವಾಡ ಗ್ರಾಮದಲ್ಲಿ ತ್ಯಾಜ್ಯ ವೀಲೆವಾರಿ ಘಟಕದ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಕರ್ಲವಾಡ ಗ್ರಾಮಸ್ಥರಿಂದ ಮನವಿಯನ್ನು ಸಲ್ಲಿಸಲಾಯಿತು.
ಹೌದು ನವಲಗುಂದ ತಾಲ್ಲೂಕಿನ ಕರ್ಲವಾಡ ಗ್ರಾಮದಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಯು ಜನವಸತಿ ಪ್ರದೇಶದಲ್ಲಿ ಬರುವುದರಿಂದ ಗ್ರಾಮದ ಜನರಿಗೆ ಮುಂದಿನ ದಿನಗಳಲ್ಲಿ ತೊಂದರೆ ಆಗಲಿದೆ. ಈ ಕಾರಣದಿಂದ ಕೂಡಲೇ ಕಾಮಗಾರಿಯನ್ನು ತಡೆಹಿಡಿಯಬೇಕು ಎಂದು ತಾಲ್ಲೂಕಿನ ತಹಶೀಲ್ದಾರ್ ಸೇರಿದಂತೆ ಎ ಓ, ಪಿ ಡಿ ಓ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
Kshetra Samachara
26/10/2021 11:03 pm