ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಾನಪದ ಕಲಾವಿದ ವೀರೇಶ ಬಡಿಗೇರ ಇನ್ನಿಲ್ಲ

ಧಾರವಾಡ: ಜಾನಪದ ಕಲಾವಿದ, ಇಂಗಳಗಿ ಗ್ರಾಮರಂಗ ರೂವಾರಿ ದೊಡ್ಡಾಟ ಕಲೆಯ ಮೂಲಕ ಜನಾನುರಾಗಿಯಾಗಿದ್ದ ವೀರೇಶ ಬಡಿಗೇರ ( 50) ಇಂದು ಬೆಳಿಗ್ಗೆ ನಿಧನರಾದರು.

ಧಾರವಾಡ ಜಿಲ್ಲೆಯ ಜಾನಪದ ಕಲಾವಿದರಿಗೆ ಅದರಲ್ಲೂ ವಿಶೇಷವಾಗಿ ಯುವ ಕಲಾವಿದರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ವೀರೇಶ್ ಬಡಿಗೇರ್ ನಿಧನ ಜಾನಪದ ಲೋಕಕ್ಕೆ ಬರಸಿಡಿಲು ಬಡಿದಂತಾಗಿದೆ. ಮೃತರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವಿದೆ.

ತಮ್ಮ ಮಧುರ ಕಂಠದಿಂದ ಜಾನಪದ ಗೀತೆಗಳನ್ನು ವೀರೇಶ ಬಡಿಗೇರ ಅವರು ನುಡಿಸಿದ ಹಾಡುಗಳನ್ನು ಕೇಳುವುದೇ ಮಹದಾನಂದವನ್ನು ನೀಡುತ್ತಿತ್ತು. ಇಂಥ ಯುವ ಕಲಾವಿದ ಇಷ್ಟು ಬೇಗನೆ ಮರೆಯಾಗುತ್ತಾನೆ ಎಂದು ಭಾವಿಸಿರಲಿಲ್ಲ ಎಂದು ಖ್ಯಾತ ದೊಡ್ಡಾಟ ಕಲಾವಿದ ಮಲ್ಲೇಶ ಮಾಳವಾಡ ದುಃಖಿಸಿದ್ದಾರೆ.

ಕುಂದಗೋಳ ಹಾಗೂ ಧಾರವಾಡ ಜಿಲ್ಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ವೀರೇಶ್ ಬಡಿಗೇರ್ ಅವರ ನೇತೃತ್ವದ ತಂಡ ಜಾನಪದ ಹಾಗೂ ತತ್ವಪದಗಳನ್ನು ತಮ್ಮ ಮಧುರ ಕಂಠದಿಂದ ಹಾಡುತ್ತಾ ರಂಜಿಸುತ್ತಿದ್ದರು ಇಂಥ ಯುವ ಕಲಾವಿದನನ್ನು ಕಳೆದುಕೊಂಡ ಗ್ರಾಮರಂಗದ ಬಳಗವೀಗ ಅನಾಥವಾದಂತಾಗಿದೆ.

Edited By : Vijay Kumar
Kshetra Samachara

Kshetra Samachara

20/10/2021 11:32 am

Cinque Terre

22.05 K

Cinque Terre

7

ಸಂಬಂಧಿತ ಸುದ್ದಿ