ನವಲಗುಂದ: ಪಟ್ಟಣದಲ್ಲಿ ಬೇರೆ ರಾಜ್ಯದಿಂದ ಬಂದವರಿಗೆ ಕಟಿಂಗ್ ಶಾಪ್ ಇಡಲು ಪರವಾನಿಗೆ ನೀಡಬಾರದು. ನೀಡಿದ್ದೆ ಆದಲ್ಲಿ ಸತ್ಯಾಗ್ರಹ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ನವಲಗುಂದ ತಾಲ್ಲೂಕು ಘಟಕವು ಪ್ರತಿಭಟನೆ ನಡೆಸಿತು.
ಪಟ್ಟಣದ ಗಣಪತಿ ದೇವಸ್ಥಾನದಿಂದ ಗಾಂಧಿ ಮಾರುಕಟ್ಟೆ, ಲಿಂಗರಾಜ ವೃತ್ತ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ಪುರಸಭೆವರೆಗೂ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆಯು, ನವಲಗುಂದ ಪುರಸಭೆಯ ವ್ಯಾಪ್ತಿಯಲ್ಲಿ ಬೇರೆ ರಾಜ್ಯದಿಂದ ಕಟಿಂಗ್ ಅಂಗಡಿಯನ್ನು ಪ್ರಾರಂಭಿಸುತ್ತಿದ್ದು, ಅಂಗಡಿಗೆ ಪರವಾನಿಗೆಯನ್ನು ನೀಡಬಾರದು. ಒಂದು ವೇಳೆ ನೀಡಿದ್ದೇ ಆದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸತ್ಯಾಗ್ರಹವನ್ನು ಪುರಸಭೆ ಕಾರ್ಯಾಲಯದ ಎದುರು ಮಾಡಲಾಗುವುದು ಎಂದು ಮನವಿ ನೀಡಿದರು.
Kshetra Samachara
06/10/2021 02:41 pm