ಹುಬ್ಬಳ್ಳಿ: ಹಳ್ಯಾಳ ಗ್ರಾಮದಲ್ಲಿ ಇತ್ತೀಚೆಗೆ ಆಕಸ್ಮಿಕ ಹಾವು ಕಡಿತದಿಂದ ಸಾವನ್ನಪ್ಪಿದ ಹನುಮಂತಪ್ಪ ಬಸಪ್ಪ ಮಲ್ಲಮ್ಮನವರ ಹಾಗೂ ಶಂಕ್ರಪ್ಪ ರಾಮಪ್ಪ ಕುಂದಗೋಳ ಇವರ ವಾರಸುದಾರರಿಗೆ ತಲಾ 2 ಲಕ್ಷ ರೂ. ಮತ್ತು ಬಣವೆ ನಷ್ಟದಾರರಾದ ಸಂಕಪ್ಪ ಬಸಪ್ಪ ನಲವಡಿ ಇವರಿಗೆ 20,000 ರೂ.ಗಳ ಪರಿಹಾರ ಧನವನ್ನು ಕಂದಾಯ ಇಲಾಖೆಯಿಂದ ಖಾತೆಗೆ ಜಮೆ ಮಾಡಲಾಗಿದೆ.
ವಾರಸುದಾರರಾದ ಲಕ್ಷ್ಮೀ ಕೋ.ಹನಮಂತಪ್ಪ ಮಲ್ಲಮ್ಮನವರ, ಸೋಮವ್ವ ಕೋ.ಶಂಕ್ರಪ್ಪ ಕುಂದಗೋಳ ಹಾಗೂ ಬಣವೆ ನಷ್ಟದಾರರಿಗೆ ನವಲಗುಂದ ಮತ ಕ್ಷೇತ್ರದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಜಮಾ ಆದೇಶ ಪ್ರತಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ, ಸಹಾಯಕ ಕೃಷಿ ನಿರ್ದೇಶಕ ಅನುಗೌಡ್ರ ಹಾಗೂ ಗ್ರಾಮ ಲೆಕ್ಕಾಧಿಕಾರಿ ಎ.ಐ ಬೋರಗಾವಿ ಸೇರಿದಂತೆ ಗ್ರಾ.ಪ. ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
18/02/2021 07:14 pm