ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮತ್ತಷ್ಟು ಕುತೂಹಲ ಕೆರಳಿಸಿದ ಮೂರುಸಾವಿರಮಠದ ಗೌಪ್ಯ ಸಭೆ:ರುದ್ರಮುನಿ ಸ್ವಾಮೀಜಿಯೊಂದಿಗೆ ಮಾತುಕತೆ

ಹುಬ್ಬಳ್ಳಿ: ಪ್ರತಿಷ್ಠಿತ ಹುಬ್ಬಳ್ಳಿಯ ಮೂರು ಸಾವಿರಮಠದಲ್ಲಿ ಸ್ವಾಮೀಜಿಗಳಿಬ್ಬರ ಗೌಪ್ಯ ಸಭೆ ಕುತೂಹಲಕ್ಕೆ ಕಾರಣವಾಗಿದೆ.ಮೂರು ಸಾವಿರ ಮಠದ ಮೂಜಗು ಶ್ರೀ ಮತ್ತು ತಿಪಟೂರಿನ ರುದ್ರಮುನಿ ಸ್ವಾಮಿ ಮಹತ್ವದ ಮಾತುಕತೆ ನಡೆದಿರುವುದು ಸಾಕಷ್ಟು ಕುತೂಹಲವನ್ನುಂಟು ಮಾಡಿದೆ.

ಹೌದು..ಕಳೆದ ಒಂದು ವರ್ಷದಿಂದ ಉತ್ತರಾಧಿಕಾರ ವಿವಾದ ಹಾಗೂ ಕಳೆದ ಸುಮಾರು ದಿನಗಳಿಂದ ಕೆಎಲ್ಇ ಸಂಸ್ಥೆಗೆ ಆಸ್ತಿ ನೀಡಿರುವ ಕುರಿತು ಸುದ್ದಿಯಲ್ಲಿದ್ದ ಮೂರುಸಾವಿರ ಮಠದ ಗೌಪ್ಯ ಸಭೆ ಈಗ ಹಲವಾರು ಅನುಮಾನ ಹುಟ್ಟು ಹಾಕಿದೆ.ಮೂರು ಸಾವಿರ ಮಠದ ಆಸ್ತಿ ಪರಭಾರೆ ಕುರಿತು ಮಾತುಕತೆ.....? ಎಂಬುವಂತ ಅನುಮಾನ ಮೂಡಿದೆ.

ಕೆಎಲ್ಇ ಸಂಸ್ಥೆಗೆ ಕೋಟ್ಯಾಂತರ ರೂಗಳ ಜಮೀನು ದಾನ ಮಾಡಿರುವ ಮೂರುಸಾವಿರ ಮಠದ ಸ್ವಾಮೀಜಿ.

ದಿಂಗಾಲೇಶ್ವರ ಸ್ವಾಮೀಜಿ ಹೋರಾಟಕ್ಕೆ ಬೆಚ್ಚಿ ಬಿದ್ದಿದ್ದಾರೆ.ಇನ್ನೂ ಮೂರುಸಾವಿರ ಮಠ ಬಿಟ್ಟು ಹಾನಗಲ್ ಮಠಕ್ಕೆ ಹೋಗಲು ತೀರ್ಮಾನಿಸಿದ್ದಾರೆಯೇ ಎಂಬುವಂತ ಸಾಕಷ್ಟು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮೂಜಗು ಮನ ಒಲಿಸಲು ಬಂದ ರುದ್ರಮುನಿ ಸ್ವಾಮೀಜಿ ಇವರು ಕೂಡ ‌ಮೂರುಸಾವಿರ ಮಠದ ಉತ್ತರಾಧಿಕಾರಿಯ ವಿವಾದಿತ ಸ್ವಾಮೀಜಿಯಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Edited By : Manjunath H D
Kshetra Samachara

Kshetra Samachara

05/02/2021 10:35 am

Cinque Terre

29.74 K

Cinque Terre

1

ಸಂಬಂಧಿತ ಸುದ್ದಿ