ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿನಯ್ ಬಿಡುಗಡೆಗೆ ದೇವರ ಮೊರೆ ಹೋದ ಅಭಿಮಾನಿಗಳು

ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಬೇಗ ಬಿಡುಗಡೆಯಾಗಿ ಬರಲಿ ಎಂದು ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.

ಧಾರವಾಡದ ಕಮಲಾಪುರದ ಬಳಿ ಇರುವ ಪತ್ರೇಶ್ವರ ದೇಸ್ಥಾನದಲ್ಲಿ ವಿನಯ್ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿನಯ್ ಅವರು ಕಳಂಕ ಮುಕ್ತರಾಗಿ ಬರಲಿ ಎಂದು ಬೇಡಿಕೊಂಡರು.

ಇನ್ನು ಮುಸ್ಲಿಂ ಸಮುದಾಯದವರು ನಮಾಜ್ ಮಾಡುವ ಮೂಲಕ ವಿನಯ್ ಅವರು ಕಳಂಕ ಮುಕ್ತರಾಗಿ ಬರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ವಿನಯ್ ಕುಲಕರ್ಣಿ ಅವರು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು, ಆ ಜಾಮೀನು ಅರ್ಜಿ ವಿಚಾರಣೆ ಇದೇ ಜ.8 ರಂದು ನಡೆಯಲಿದೆ.

Edited By : Manjunath H D
Kshetra Samachara

Kshetra Samachara

04/01/2021 11:44 am

Cinque Terre

21.93 K

Cinque Terre

3

ಸಂಬಂಧಿತ ಸುದ್ದಿ