ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೆಂಡಿಗೇರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ರಾಮು ನಿಧನ

ಹುಬ್ಬಳ್ಳಿ: ಕರ್ತವ್ಯದ ಮೇಲೆ ಸೇವೆ ಸಲ್ಲಿಸುತ್ತಿದ್ದ ಬಹುತೇಕರಿಗೆ ಚಿರಪರಿಚಿತರಾಗಿದ್ದ ಮುಖ್ಯ ಪೇದೆಯೋರ್ವರು, ಲೋ ಬಿಪಿಯಿಂದ ಸಾವಿಗೀಡಾದ ಘಟನೆ ನಡೆದಿದೆ.

1993 ಬ್ಯಾಚ್‌ನ ರಾಮು ಕೊರವರ ಸಾವಿಗೀಡಾದ ಪೊಲೀಸ್ ಪೇದೆ. ರಾಮು ಅವರು ಘಂಟಿಕೇರಿ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹುಬ್ಬಳ್ಳಿ-ಧಾರವಾಡದ ಬಹುತೇಕ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದ ರಾಮು ಕೊರವರ ಸಾವು, ಇಲಾಖೆಯಲ್ಲಿ ತೀವ್ರ ಕಳವಳವನ್ನುಂಟು ಮಾಡಿ

ರಾಮು ಕೊರವರ, ಪ್ರತಿಯೊಂದು ಕಚೇರಿಯಲ್ಲೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗ ತೊಂದರೆಯಾದ ತಕ್ಷಣವೇ, ಅವರನ್ನು ಧಾರವಾಡದ ಬಳಿಯಿರುವ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರಾಮು ಕೊರವರ ನಿಧನರಾಗಿದ್ದಾರೆ. ಇದರಿಂದ ಹುಬ್ಬಳ್ಳಿ-ಧಾರವಾಡದ ಪೊಲೀಸರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ

Edited By : Vijay Kumar
Kshetra Samachara

Kshetra Samachara

03/01/2021 10:53 pm

Cinque Terre

37.82 K

Cinque Terre

54

ಸಂಬಂಧಿತ ಸುದ್ದಿ