ಹುಬ್ಬಳ್ಳಿ: ವಿಧಾನಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೆಗೌಡರ ಹಠಾತ್ ನಿಧನ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ
ಜೆಡಿಎಸ್ ನಾಯಕರು ಅವರ ಭಾವಚಿತ್ರಕ್ಕೆ ಶ್ರಧ್ದಾಂಜಲಿ ಸಲ್ಲಿಸ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಚಾರಣೆ ಮಾಡಿದರು.
ನಂತರ ಮಾತನಾಡಿದ ಮಾಜಿ ಶಾಸಕ ಎನ್ ಹೆಚ್ ಕೊನರೆಡ್ಡಿ ಎಸ್ ಎಲ್ ಧರ್ಮೇಗೌಡರ ನಿಧನ ಸುದ್ದಿಯನ್ನು ನಂಬಲು ಆಗಿತ್ತಿಲ್ಲ ಶಾಸಕರಾಗಿ,
ಉಪಸಭಾಪತಿಗಳಾಗಿ ಜನಮನ್ನಣೆ ಗಳಿಸಿದ್ದ ಅವರ ದುರಂತ ಅಂತ್ಯ ಅತ್ಯಂತ ದುಃಖ ತಂದಿದೆ.ಅವರು ಎಲ್ಲರೂ ಜೊತೆ ಆತ್ಮೀಯರಾಗಿದ್ದರು.
ವಿಧಾನ ಪರಿಷತ್ತಿನಲ್ಲಿ ನಡೆದ ವಿಚಾರ ಹೇಳಿಕೊಂಡು ನೊಂದಿದ್ದರು, ಆ ವಿಚಾರಕ್ಕೆ ಅವರು ಇಂತಹ ನಿರ್ಧಾರ ಕೈಗೊಂಡಿರಬಹುದು,
ರಾಜಕೀಯದಲ್ಲಿ ಇಂತಹ ಘಟನೆ ಆಗಬಾರದು, ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದು ಬಹಳ ನೋವು ತಂದಿದೆ ಎಂದು ಕಣ್ಣಿರು ಹಾಕಿದರು...
Kshetra Samachara
29/12/2020 12:13 pm