ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PublicNext ಸ್ಪರ್ಧೆ ಗೆದ್ದ ಪುಟಾಣಿಗಳು ಇವರೇ ನೋಡಿ

ಮಕ್ಕಳ ದಿನಾಚರಣೆ ಅಂಗವಾಗಿ PublicNext ಏರ್ಪಡಿಸಿದ್ದ ಮುದ್ದು ಪುಟಾಣಿಗಳ ಫೋಟೊ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದ್ದೇವೆ.

ಮೊದಲ ಬಹುಮಾನ ವಿದ್ಯಾ ಸಂಗನಗೌಡರ, ಹುಬ್ಬಳ್ಳಿ. ಎರಡನೇ ಬಹುಮಾನ ಭಾರ್ಗವ್ ಪರಮೇಶ ದೊನ್ನಿ ಧಾರವಾಡ, ಮೂರನೇ ಬಹುಮಾನ ಅದಿತಿ ನಾಗಠಾಣ ಹುಬ್ಬಳ್ಳಿ,

ಬಹುಮಾನ ವಿಜೇತ ಮೂರೂ ಮಕ್ಕಳಿಗೂ PublicNext ಆಡಳಿತ ಮಂಡಳಿ ಹಾಗೂ 2.50 ಲಕ್ಷಕ್ಕೂ ಹೆಚ್ಚು ವೀಕ್ಷಕರ ಪರವಾಗಿ ತುಂಬು ಹೃದಯದ ಅಭಿನಂದನೆ.

ಭಾಗವಹಿಸಿದ ಎಲ್ಲ ಮಕ್ಕಳ ಫೋಟೊಗಳೂ ಸುಂದರವಾಗಿವೆ. ಬಹುಮಾನ ಬಾರದ ಕಾರಣ ಅವು ಸುಂದರವಾಗಿಲ್ಲವೆಂದೆಲ್ಲ. ತೀರ್ಪುಗಾರರ ನಿರ್ಧಾರ ಗೌರವಿಸಿ ಅವರು ಸೂಚಿಸಿದ ಫೋಟೊಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಿದ್ದೇವೆ.

ಶ್ರೀಘ್ರದಲ್ಲಿಯೇ ಬಹುಮಾನ ವಿಜೇತ ಮಕ್ಕಳ ಪಾಲಕರನ್ನು ಸಂಪರ್ಕಿಸಿ ನೇರವಾಗಿ ಅವರ ಮನೆಗೆ ಬಹುಮಾನ ತಲುಪಿಸಲಾಗುವುದು. ಕಳೆದ ಬಾರಿ ನಮ್ಮ ಕಚೇರಿಗೇ ಮಕ್ಕಳು ಹಾಗೂ ಪಾಲಕರನ್ನು ಆಹ್ವಾನಿಸಿ ಬಹುಮಾನ ವಿತರಿಸಿ ಸಂಭ್ರಮಿಸಿದ್ದೆವು. ಆದರೆ ಈ ಬಾರಿ ಕೊರೊನಾ ನಿಯಮಾಳಿ ಪಾಲಿಸಲೇ ಬೇಕಾಗಿದ್ದರಿಂದ ಇದು ಸಾಧ್ಯವಾಗದೆ ನಾವೇ ಮಕ್ಕಳಿಗೆ ಬಹುಮಾನ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ. ಸಾರಿ ಮಕ್ಕಳೆ.... ಮುಂದಿನ ಬಾರಿ ಇದಕ್ಕಿಂತಲೂ ಹೆಚ್ಚು ಅದ್ಧೂರಿಯಾಗಿ ಆಚರಿಸೋಣ.

Edited By : Nagesh Gaonkar
Kshetra Samachara

Kshetra Samachara

20/11/2020 06:26 pm

Cinque Terre

59.84 K

Cinque Terre

25

ಸಂಬಂಧಿತ ಸುದ್ದಿ