ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ತಾಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು

ಕಲಘಟಗಿ:ತಾಲೂಕಿನ ಅರಣ್ಯದಂಚಿನ ಕಂದ್ಲಿ,ಡಿಂಬವಳ್ಳಿ,ಬೈಚವಾಡ ಹಾಗೂ ಜುಂಜನಬೈಲ್ ಗ್ರಾಮಗಳ ಹೊಲಗಳಿಗೆ ಆನೆಗಳ ಹಿಂಡು ಲಗ್ಗೆ ಇಟ್ಟಿದ್ದು,ಆನೆಗಳ ಹಿಂಡನ್ನು ಮರಳಿ ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯನ್ನು ಸೋಮವಾರ ಮಾಡಿದ್ದಾರೆ.

ಕಳೆದ ಒಂದು ವಾರದಿಂದ,ಹದಿನೈದು ಆನೆಗಳ ಹಿಂಡು ಅರಣ್ಯದಂಚಿನ ಗ್ರಾಮಗಳ ರೈತರ ಹೊಲಗಳಿಗೆ ನೀರು ಹಾಗೂ ಆಹಾರ ಅರಸಿ ಬಂದಿವೆ.ಆನೆಗಳು ಅಲ್ಪ ಭತ್ತ ಕಬ್ಬಿನ ಬೆಳೆ ಹಾನಿ ಮಾಡಿವೆ.

ಅರಣ್ಯ ದಂಚಿನ ಗ್ರಾಮಗಳ ಹತ್ತಿರ ಪದೇ ಪದೇ ಆನೆಗಳ ಹಿಂಡು ಕಾಣಿಸಿಕೊಳ್ಳುತ್ತಿವೆ.ಆನೆಗಳನ್ನು ಕಾಡಿಗೆ ಅಟ್ಟುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

ಕಾರ್ಯಚರಣೆಗಿಳಿದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ‌ ಆನೆಗಳನ್ನು ಕಿರವತ್ತಿ ಅರಣ್ಯ ಪ್ರದೇಶ ಪ್ರವೇಶ ಮಾಡುವಂತೆ ಮಾಡಿದ್ದಾರೆ ಎಂದು ಆರ್ ಎಫ್ ಒ ಶ್ರೀಕಾಂತ್ ಪಾಟೀಲ‌ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

09/11/2020 07:59 pm

Cinque Terre

64.14 K

Cinque Terre

0

ಸಂಬಂಧಿತ ಸುದ್ದಿ