ಧಾರವಾಡ: ನಿನ್ನೆ ರಾತ್ರಿಯಿಂದಲೇ ಧಾರವಾಡ ಜಿಲ್ಲೆಯಾದ್ಯಂತ ಮಳೆ ಮತ್ತೆ ಅಬ್ಬರಿಸುತ್ತಿದ್ದು, ಮಳೆಯಿಂದಾಗಿ ಧಾರವಾಡಿಗರು ಕಂಗಾಲಾಗಿದ್ದಾರೆ.
ನಿನ್ನೆ ಮಧ್ಯಾಹ್ನದವರೆಗೂ ಮೋಡ ಕವಿದ ವಾತಾವರಣದೊಂದಿಗೆ ಆಗಾಗ ಮಳೆಯಾಗುತ್ತಿತ್ತು. ರಾತ್ರಿ ಹೊತ್ತು ಅಬ್ಬರದ ಮಳೆಯಾಗಿದೆ. ಇಂದು ಬೆಳಿಗ್ಗೆಯಿಂದಲೇ ಮಳೆ ಮತ್ತೆ ತನ್ನ ಆರ್ಭಟ ಮುಂದುವರೆಸಿದೆ. ಒಂದೆಡೆ ರೈತ ಸಮುದಾಯ ಕೃಷಿ ಚಟುವಟಿಕೆ ನಡೆಸಲಾಗದೇ ಪರದಾಡುವಂತಾಗಿದೆ.
Kshetra Samachara
12/09/2022 01:03 pm