ಧಾರವಾಡ: ಪೊಲೀಸ್ ಅಧೀಕ್ಷಕರು ಹಾಗೂ ಗೃಹರಕ್ಷಕ ಆಯ್ಕೆ ಸಮಿತಿಯಿಂದ ಧಾರವಾಡ ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ 170 ಗೃಹ ರಕ್ಷಕರ ಸ್ವಯಂ ಸೇವಕ ಸದಸ್ಯರ ಹುದ್ದೆಗಳ ನೋಂದಣಿಗಾಗಿ ಸೆಪ್ಟೆಂಬರ್ 17 ರವೆರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿಗಳನ್ನು ಜಿಲ್ಲಾ ಸಮಾದೇಷ್ಟರು, ಗೃಹರಕ್ಷಕದಳ ಕಚೇರಿ, ಡಿ.ಎ.ಆರ್. ಪೊಲೀಸ್ ಹೆಡ್ ಕ್ವಾರ್ಟರ್ಸ್ ಆವರಣ, ಧಾರವಾಡ ಇಲ್ಲಿ ಪಡೆದು, ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 17 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ 0836-2442496, ಸಹಾಯಕ ಆಡಳಿತಾಧಿಕಾರಿಗಳು, ಪೊಲೀಸ್ ಅಧೀಕ್ಷಕರ ಕಛೇರಿ, ಧಾರವಾಡ-0836-2233205 ಸಂಪರ್ಕಿಸಿ ಮಾಹಿತಿ ಪಟೆದುಕೊಳ್ಳಬಹುದು ಎಂದು ಗೃಹರಕ್ಷಕರ ನೋಂದಣಿ ಆಯ್ಕೆ ಸಮಿತಿಯ ಪೊಲೀಸ್ ಅಧ್ಯಕ್ಷರೂ ಆಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
09/09/2022 07:17 pm