ಧಾರವಾಡ: ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆಯಲ್ಲಿ ಶಿಕ್ಷಕರಿಗೆ ಅನ್ಯಾಯವಾಗಿದ್ದು, ಕಳೆದ 5 ವರ್ಷದಿಂದ ಈ ರೀತಿ ಆಗುತ್ತಿದೆ ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಆರೋಪಿಸಿದ್ದಾರೆ.
ದೇಶದಲ್ಲಿ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದವರೆಗೆ 50 ಲಕ್ಷಕ್ಕೂ ಹೆಚ್ಚು ಶಿಕ್ಷಕರಿದ್ದು ಕೇವಲ ದೇಶದಾದ್ಯಂತ 45 ಶಿಕ್ಷಕರುಗಳಿಗೆ ಮಾತ್ರ ರಾಷ್ಟ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕಳೆದ 5-6 ವರ್ಷಗಳಿಗೆ ಮುಂಚೆ ಪ್ರತಿ ವರ್ಷ 360 ಶಿಕ್ಷಕರುಗಳಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಕರ್ನಾಟಕದ ಕನಿಷ್ಠ 10 ಶಿಕ್ಷಕರುಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಈಗ ಈ ಅವಕಾಶ ತಪ್ಪಿದೆ ಈ ಅನ್ಯಾಯ ಸರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹಲವಾರು ಸಲ ವಿನಂತಿ ಮಾಡಿದ್ದರೂ ಸಹ ಪ್ರಶಸ್ತಿ ಆಯ್ಕೆಯಲ್ಲಿ ಕೇಂದ್ರ ಸರ್ಕಾರ ಜಿಪುಣತನ ತೋರಿದೆ. ಇದು ಖಂಡನೀಯ. ತಕ್ಷಣ ಈ ಅನ್ಯಾಯ ಸರಿಪಡಿಸಿ ಪ್ರತಿ ರಾಜ್ಯಕ್ಕೆ ಕನಿಷ್ಠ 15 ರಾಷ್ಟ್ರ ಪ್ರಶಸ್ತಿಗಳಂತೆ ಈ ಹಿಂದಿನ ಕೇಂದ್ರ ಸರ್ಕಾರಗಳು ನೀಡಿದ ರೀತಿ ಕನಿಷ್ಠ 350 ಕ್ಕೂ ಹೆಚ್ಚು ರಾಷ್ಟ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನೀಡಿ ಶಿಕ್ಷಕರುಗಳಿಗೆ ಗೌರವ ಸಲ್ಲಿಸಬೇಕೆಂದು ಗುರಿಕಾರ ಆಗ್ರಹಿಸಿದ್ದಾರೆ.
Kshetra Samachara
26/08/2022 05:13 pm