ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಾಲಿಸ್ಟರ್ ಧ್ವಜಕ್ಕೆ ವಿರೋಧ: ಆಮ್ ಆದ್ಮಿಯಿಂದ ಪ್ರತಿಭಟನೆ

ಧಾರವಾಡ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಎಂಬ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭ ಮಾಡಿದ್ದು, ಈ ಅಭಿಯಾನದಲ್ಲಿ ಪಾಲಿಸ್ಟರ್ ಧ್ವಜಕ್ಕೆ ಮಾನ್ಯತೆ ನೀಡಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಧಾರವಾಡ ತಾಲೂಕಿನ ಗರಗ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಖಾದಿ ಬಟ್ಟೆಗೆ ತನ್ನದೇ ಆದ ಗೌರವ ಇದೆ. ಮೊದಲಿನಿಂದಲೂ ಖಾದಿ ಬಟ್ಟೆಯ ರಾಷ್ಟ್ರಧ್ವಜವನ್ನೇ ಹಾರಿಸುತ್ತ ಬರಲಾಗಿದೆ. ಆದರೆ, ಈಗ ಸರ್ಕಾರಗಳು ಪಾಲಿಸ್ಟರ್ ಬಟ್ಟೆಯ ಧ್ವಜಗಳಿವೆ ಮಾನ್ಯತೆ ನೀಡಿವೆ. ಪಾಲಿಸ್ಟರ್ ಬಟ್ಟೆಯ ಧ್ವಜಗಳು ಸರಿಯಾಗಿಲ್ಲ. ಅಲ್ಲಲ್ಲಿ ಹರಿದಿವೆ ಹೀಗಾಗಿ ಸರ್ಕಾರ ಈ ಧ್ವಜಗಳನ್ನು ಬಿಟ್ಟು ಖಾದಿ ಬಟ್ಟೆಯ ಧ್ವಜಗಳಿಗೆ ಹೆಚ್ಚಿನ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.

Edited By : PublicNext Desk
Kshetra Samachara

Kshetra Samachara

13/08/2022 10:39 pm

Cinque Terre

22.69 K

Cinque Terre

1

ಸಂಬಂಧಿತ ಸುದ್ದಿ