ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ಯಾಂಗಳ ನೀರು ಸಂಗ್ರಹಣ ಸಾಮರ್ಥ್ಯ ಕಡಿಯಾಗುತ್ತಿದೆ: ಕಲೂತಿ

ಧಾರವಾಡ: ನೀರಿನ ಮತ್ತು ಭೂಮಿಯ ನಿರ್ವಹಣೆ ಉತ್ತಮವಾಗಿ ಮಾಡಿದಾಗ ಮಾತ್ರ ರೈತರಿಗೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಉತ್ತಮ ಭವಿಷ್ಯವಿದೆ. ದಿನದಿಂದ ದಿನಕ್ಕೆ ಡ್ಯಾಂಗಳ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಆದರೆ, ಕೃಷಿ ಮತ್ತು ಇತರೆ ಬೇಡಿಕೆಗಳು ಹೆಚ್ಚಾಗುತ್ತಿರುವುದರಿಂದ ನೀರಿನ ಸಮರ್ಪಕ ನಿರ್ವಹಣೆಯಾಗಬೇಕೆಂದು ಬೆಳಗಾವಿ ಜಿಲ್ಲೆಯ ಸಹಕಾರಿ ಧುರಿಣ ಎಸ್.ಎಂ.ಕಲೂತಿ ಹೇಳಿದರು.

ವಾಲ್ಮಿಯಲ್ಲಿ ಏರ್ಪಡಿಸಿದ್ದ ಮಲಪ್ರಭ ಮತ್ತು ಘಟಪ್ರಭಾ ಯೋಜನೆ ನೀರು ಬಳಕೆದಾರರ ಸಹಕಾರ ಸಂಘಗಳ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನೀರು ಬಳಕೆದಾರರ ಸಹಕಾರ ಸಂಘಗಳು ಮತ್ತು ಸಹಭಾಗಿತ್ವದ ವ್ಯವಸ್ಥೆ ಕಾಯ್ದೆ ಅಡಿಯಲ್ಲಿ ಕೊಟ್ಟಿರುವ ಅಧಿಕಾರಿವನ್ನು ನಿಷ್ಠೆ, ಮುತುವರ್ಜಿ ಮತ್ತು ಸೇವಾ ಮನೋಭಾವನೆಯಿಂದ ನಿರ್ವಹಿಸಿದರೆ ಸಹಕಾರ ಉದ್ದೇಶ ನೆರವೇರುತ್ತದೆ ಎಂದರು.

ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ಚುನಾಯಿತ ಪ್ರತಿನಿಧಿಗಳು ಉತ್ತಮ ಸ್ಥಾನಕ್ಕೆ ಬಂದಿದ್ದು ತಮ್ಮ ಅಧಿಕಾರಾವಧಿಯಲ್ಲಿ ಸಂಘಗಳನ್ನು ಬಲವರ್ಧನೆಗೊಳಿಸುವುದರ ಜೊತೆಗೆ ಅಕ್ಕ-ಪಕ್ಕದ ಸಂಘಗಳ ಪ್ರಗತಿಗೆ ಮಾದರಿಯಾಗಬೇಕು. ವಾಲ್ಮಿ ಕಾರ್ಯಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಾಲ್ಮಿ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಮಾತನಾಡಿ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಗಳ ಚುನಾಯಿತ ಪ್ರತಿನಿಧಿಗಳಾದ ನಿಮಗೆ ಮಣ್ಣು, ನೀರು, ರೈತರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕಾರ್ಯಾಗಾರದಲ್ಲಿ ಮಹಾಮಂಡಳದ ಪ್ರತಿನಿಧಿಗಳ ಜವಾಬ್ದಾರಿಗಳ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು. ವಾಲ್ಮಿ ಸಂಸ್ಥೆಯಲ್ಲಿ ಮಹಾಮಂಡಳಗಳ ಪುನಶ್ಚೇತನಕ್ಕೆ ಅನೇಕ ಕಾರ್ಯಕ್ರಮಗಳನ್ನು ಕೈಕೊಳ್ಳಲಾಗುತ್ತಿದ್ದು, ಕರ್ನಾಟಕ ರಾಜ್ಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಗಳ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ವಾಲ್ಮಿ ಪ್ರಯತ್ನಗಳ ಮೂಲಕ ಸಾಕಷ್ಟು ಪ್ರಗತಿಯನ್ನು ಕೂಡಾ ಸಾಧಿಸಲಾಗಿದೆ ಎಂದರು.

ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕಿ ಹನುಮಾಕ್ಷಿ ಗೋಗಿ ಮಾತನಾಡಿ, ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಚುನಾಯಿತರಾದ ಮಹಾಮಂಡಳದ ಪ್ರತಿನಿಧಿಗಳು ನೀರು ಬಳಕೆದಾರರ ಸಹಕಾರ ಸಂಘಗಳ ಆಡಳಿತ ಸುಧಾರಣೆ ಮೂಲಕ ಬಲವರ್ಧನೆಗೆ ಶ್ರಮಿಸಬೇಕು. ವಾಲ್ಮಿ ಸಂಸ್ಥೆಯಿಂದ ಪಡೆದ ತರಬೇತಿಯನ್ನು ಸಂಘಗಳ ಅಭಿವೃದ್ಧಿಗೆ ಅಳವಡಿಸಿದಾಗ ಮಾತ್ರ ಕಾರ್ಯಾಗಾರದ ಯಶಸ್ಸು ಸಾಧ್ಯ ಎಂದರು.

ಭೂ ಅಭಿವೃದ್ಧಿ ಅಧಿಕಾರಿ ಡಾ.ಸಿ.ಬಿ.ಬಾಲರೆಡ್ಡಿ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಗಳ ಚುನಾಯಿತ ಪ್ರತಿನಿಧಿಗಳಿಗೆ ಜಲ ಮತ್ತು ನೆಲ ಸಂರಕ್ಷಣಾ ಪ್ರತಿಜ್ಞಾ ವಿಧಿ ಭೋಧಿಸಿದರು.

Edited By : PublicNext Desk
Kshetra Samachara

Kshetra Samachara

05/08/2022 10:00 pm

Cinque Terre

13.01 K

Cinque Terre

1

ಸಂಬಂಧಿತ ಸುದ್ದಿ