ಧಾರವಾಡ: ಮಾನವ ಅನುವಂಶ ಶಾಸ್ತ್ರ, ಇದು ಮನುಷ್ಯನಿಗೆ ಬಹುಮುಖ್ಯವಾದ ವಿಷಯ. ಆನುವಂಶವಾಗಿ ಬರತಕ್ಕಂತ ಗುಣಗಳು ಹೇಗೆ ಬರುತ್ತವೆ ಎಂಬುದನ್ನು ಗ್ರೆಗೆರ್ ಮಂಡಲ್ ಕಂಡು ಹಿಡಿದ ನಿಯಮಗಳನ್ನು ತಿಳಿದುಕೊಂಡರೆ ವಿಕೃತ ಅಥವಾ ಬುದ್ಧಿಮಾಂದ್ಯ ಮಕ್ಕಳು ಜನಿಸುವುದನ್ನು ನಿಲ್ಲಿಸಬಹುದು ಎಂದು ಕವಿವಿಯ ವಿಶ್ರಾಂತ ಕುಲಪತಿ ಪ್ರೊ.ಪ್ರಮೋದ ಗಾಯಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ದಿ. ವಿಶಾಲ ರಾಜಶೇಖರ ಹಂಚಿಮನಿ ಸಂಸ್ಮರಣೆ ದತ್ತಿ ಅಂಗವಾಗಿ ಧಾರವಾಡದ ಕಲ್ಯಾಣನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ್ದ ‘ರಕ್ತ ಸಂಬಂಧದೊಳಗಿನ ಮದುವೆ: ಸಾಧಕ-ಬಾಧಕ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಕ್ತಸಂಬಂಧಿ ಮದುವೆಗಳು ಬಹಳಷ್ಟು ಅಸಮರ್ಥ ಮಕ್ಕಳ ಜನನಕ್ಕೆ ಕಾರಣವಾಗುತ್ತಿದ್ದು, ಕರ್ನಾಟಕದಲ್ಲಿ ಹೆಚ್ಚಿದೆ. ರಕ್ತಸಂಬಂಧಿಯಲ್ಲಿ ಮದುವೆಯಾಗುತ್ತಿರುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಕಾರಕವೇ ಎನ್ನುವುದನ್ನು ಸಮಾಜಕ್ಕೆ ಸರಿಯಾಗಿ ಅರಿವನ್ನು ಮೂಡಿಸಬೇಕಿದೆ. ಎಲ್ಲಿ ರಕ್ತ-ಸಂಬಂಧಿ ಮದುವೆಗಳಿರುತ್ತವೆಯೋ ಅಲ್ಲಿ ಆನುವಂಶಕ ರೋಗಗಳು ಹೆಚ್ಚು ಇರುತ್ತವೆ ಎಂದರು.
ಹಿರೇಮಲ್ಲೂರ ಈಶ್ವರನ್ ಪಪೂ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದತ್ತಿದಾನಿ ಚನಬಸಪ್ಪ ಮರದ, ವಿಶ್ವೇಶ್ವರಿ ಬ. ಹಿರೇಮಠ, ಶಂಕರ ಕುಂಬಿ, ಈರಣ್ಣ ಇಂಜಗನೇರಿ, ಆನಂದ ಗೊನ್ನಾಗರ ಇತರರಿದ್ದರು.
Kshetra Samachara
03/08/2022 10:17 pm