ಧಾರವಾಡ: ಬರುವ ಆಗಸ್ಟ್ 28 ರಂದು ರಾಜ್ಯದಾದ್ಯಂತ ಆಯೋಜಿಸುತ್ತಿರುವ ಬೃಹತ್ ಯೋಗಥಾನ್ 2022 ಅನ್ನು ಯಶಸ್ವಗೊಳಿಸಲು ಜಿಲ್ಲೆಯ ಎನ್ ಎಸ್ ಎಸ್ ಹಾಗೂ ಎನ್ ಸಿ ಸಿ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸುವುದು ಮುಖ್ಯವಾಗಿದೆ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಯೋಗಥಾನ್ 2022 ರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಗಥಾನ್ 2022 ರಲ್ಲಿ ಧಾರವಾಡ ಜಿಲ್ಲೆಯಿಂದ ಸುಮಾರು ಇಪ್ಪತ್ತು ಸಾವಿರ ಯೋಗಪಟುಗಳು ಭಾಗವಹಿಸಬೇಕಾಗುತ್ತದೆ. ಈ ಕುರಿತು ಈಗಾಗಲೇ ಸಭೆ ಜರುಗಿಸಿ, ಸಂಭವಿಸಿದ ಇಲಾಖೆ ಹಾಗೂ ಸಂಘಟನೆಗಳಿಗೆ ಮಾಹಿತಿ ನೀಡಲಾಗಿದೆ. ಯೋಗಾಸನಗಳನ್ನು ಈಗಿನಿಂದಲೇ ತರಬೇತಿ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಅಂತರಾಷ್ಟ್ರೀಯ ಯೋಗದಿನದಂದು ಮಾಡುವ ಯೋಗ ಆಸನಗಳನ್ನೇ ಯೋಗಥಾನ್‍ದಲ್ಲಿಯೂ ಮಾಡಲು ತಿಳಿಸಲಾಗಿದೆ. ಆದ್ದರಿಂದ ಯೋಗ ಪಠ್ಯ ಲಭ್ಯವಿರುವದರಿಂದ ಮುಂದಿನ ಭಾನುವಾರದಂದು ಯೋಗ ಪ್ರ್ಯಾಕ್ಟಿಸ್ ಮಾಡಬೇಕೆಂದು ಅವರು ಹೇಳಿದರು.
ಯೋಗಥಾನ್ 2022 ನ್ನು ಯಶಸ್ವಿಯಾಗಿ ಆಯೋಜಿಸಲು ಸಂಘಟನಾ ಸಮಿತಿ, ವೇದಿಕೆ ಮತ್ತು ಕಾರ್ಯಕ್ರಮ ಸಮಿತಿ, ಪ್ರಚಾರ ಸಮಿತಿ, ಉಪಹಾರ, ಬ್ಯಾರಿಕೆಡ್, ಎಕ್ಸಿಟ್ ಹಾಗೂ ಎಂಟರನ್ಸಗಳ ಭದ್ರತೆಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಎಲ್ಲರೂ ಆಸಕ್ತಿಯಿಂದ ಕ್ರಿಯಾಶೀಲವಾಗಿ ಭಾಗವಿಸಬೇಕು ಎಂದರು.
ಎನ್ ಎಸ್ ಎಸ್, ಎನ್ ಸಿ ಸಿ, ಯೋಗ ಸಂಸ್ಥೆಗಳು, ವಿವಿಧ ಸಾರ್ವಜನಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಯೋಗಥಾನ್ ದಲ್ಲಿ ಭಾಗವಹಿಸಲು ಅನುವು ಆಗುವಂತೆ ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆ ಮಾಡಲು ಯೋಚಿಸಲಾಗಿದೆ. ಯೋಗಥಾನ್ ದಲ್ಲಿ ಎಲ್ಲ ಪ್ರೌಢಶಾಲಾ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಕ್ರಮವಹಿಸಬೇಕೆಂದು ಅವರು ಸೂಚಿಸಿದರು. ಯೋಗಥಾನ್ ಯಶಸ್ವಿಗೆ ಮಾಡಬೇಕಾದ ಕಾರ್ಯಗಳ ಕುರಿತು ನಿರ್ದೇಶನ ನೀಡಲಾಗುವುದು ಎಂದರು.
Kshetra Samachara
20/07/2022 10:08 pm