ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೂವು, ಹಣ್ಣು ಹಾಗೂ ಅಲಂಕಾರಿಕ ಸಸಿ ಮತ್ತು ಕಸಿ ಮಾಡಿದ ಸಸಿಗಳು ಮಾರಾಟಕ್ಕೆ ಲಭ್ಯ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ರೈತರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆ ಅಧೀನ ವಿವಿಧ ತೋಟಗಾರಿಕೆ ಕ್ಷೇತ್ರ, ನರ್ಸರಿಗಳಲ್ಲಿ 1.5 ಲಕ್ಷ ಹಣ್ಣಿನ, ಹೂವಿನ ಹಾಗೂ ಅಲಂಕಾರಿಕ ಸಸಿಗಳನ್ನು ಮತ್ತು ಕಸಿ ಮಾಡಿದ ಸಸಿಗಳನ್ನು ಸರ್ಕಾರ ನಿಗದಿಪಡಿಸಿರುವ ರಿಯಾಯಿತಿ ದರದಲ್ಲಿ ಮಾರಟಕ್ಕೆ ಲಭ್ಯವಿವೆ.

ಆಸಕ್ತಿ ಉಳ್ಳವರು ಕ್ಷೇತ್ರದ ಸಿಬ್ಬಂದಿಯನ್ನು ಸಂಪರ್ಕಿಸಿ ಇದರ ಲಾಭ ಪಡೆಯಬಹುದು.

ಧಾರವಾಡ ತಾಲೂಕು, ಜಿಲ್ಲಾ ನರ್ಸರಿ, ಧಾರವಾಡ, -ಸಿದ್ದಪ್ಪ ರಬ್ಬನಿ-9986526066, ಶಶಿಕಲಾ ಪಾಟೀಲ - 8951476035, ಧಾರವಾಡ ತಾಲೂಕು, ಕಣವಿ ಹೊನ್ನಾಪೂರ ತೋಟಗಾರಿಕೆ ಕ್ಷೇತ್ರ-ವರ್ಷ ಬೆಂಡಿಗೇರಿ-8867887191, ಎಚ್ ಜಮುನಾಳ–9880249047, ಕುಂದಗೋಳ ತಾಲೂಕು, ಜಿಗಳೂರು ತೋಟಗಾರಿಕೆ ಕ್ಷೇತ್ರ, ಜಿಗಳೂರು ಸುಬಿಯಾ ಆರ್ ಕೆಂಗೊಂಡ-8970812270, ಎಂ.ಮಳಲಿ-9353032344, ಕಲಘಟಗಿ ತಾಲೂಕು, ದಾಸ್ತಿಕೊಪ್ಪ ತೋಟಗಾರಿಕೆ ಕ್ಷೇತ್ರ ಕುಮಾರಿ ಯಶಸ್ವಿನಿ ನಿಚ್ಚಣಕಿ-9611506210, ನವಲಗುಂದ ತಾಲೂಕು, ನವಲಗುಂದ ಕಛೇರಿ ನರ್ಸರಿ ಜ್ಯೋತಿ ಅಂಗಡಿ– 7019017214 ಸಂಪರ್ಕಿಸಬಹುದು.

ನರ್ಸರಿಗಳಲ್ಲಿ ಲಭ್ಯವಿರುವ ಸಸಿ, ಕಸಿಗಳ ವಿವರ: ದ್ವಿವಾಟೆ ಮಾವು-ಆಪೂಸ್ ತಳಿ, ಪೇರಲ-ಐ49 ತಳಿ, ತೆಂಗು-ಖಿxಆ ಕುಬ್ಜ ತಳಿ, ತೆಂಗು ಅರಸಿಕೆರೆ ಟಾಲ್, ವಾಟರ್ ಆಪಲ್, ಪಪ್ಪಾಯ, ಲಿಂಬು, ನುಗ್ಗೆ, ಕರಿಬೇವು ಹಾಗೂ ವಿವಿಧ ಜಾತಿಯ ಹೂವಿನ ಹಾಗೂ ಅಲಂಕಾರಿಕ ಸಸಿಗಳು ಲಭ್ಯವಿವೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

11/07/2022 09:57 pm

Cinque Terre

6.39 K

Cinque Terre

1

ಸಂಬಂಧಿತ ಸುದ್ದಿ