ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯೋಗ ಮಾಡುವುದರಿಂದ ಮನಸ್ಸು ಮತ್ತು ದೇಹವನ್ನು ಸದೃಢಗೋಳಿಸುತ್ತದೆ; ಲಿಂಗರಾಜ ಅಂಗಡಿ

ಹುಬ್ಬಳ್ಳಿ: ಯೋಗ'ಲ ಎಂಬುದು ಪ್ರಾಚೀನ ಭಾರತದ ಪರಂಪರೆಯ ಅತಿ ಮಹತ್ವದ ಕೊಡುಗೆ ಆಗಿದೆ. ದೇಹ ಮತ್ತು ಮನಸ್ಸನ್ನು ಒಳಗೊಳ್ಳುವ ಕ್ರಿಯೆ ಇದು ಯೋಚನೆ ಮತ್ತು ಕ್ರಮದ, ನಿಯಂತ್ರಣ ಮತ್ತು ಈಡೇರುವಿಕೆ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಬಾಂಧವ್ಯವೇ ಯೋಗ ಕ್ರಿಯೆ ಆಗಿದೆ.

ನಗರದ ಮೂರುಸಾವಿರಮಠದ ಆವರಣದಲ್ಲಿ ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳಿಂದ ಹಮ್ಮಿಕೊಳ್ಳಲಾದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಡಾ.ಲಿಂಗರಾಜ ಅಂಗಡಿಯವರು ಹೇಳಿದರು.

ಅಷ್ಟೇ ಅಲ್ಲದೆ ದೈಹಿಕ ಕ್ಷಮತೆ ಕಾಯ್ದುಕೊಳ್ಳುವುದು ಮತ್ತು ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ಬಾರಿಯ ಯೋಗ ದಿನಾಚರಣೆಗೆ ಪೂರಕವಾಗಿ ವಿಶ್ವಸಂಸ್ಥೆ ಘೋಷವಾಕ್ಯವೊಂದನ್ನು ನೀಡುತ್ತದೆ. ಅದರಂತೆ, ಈ ಬಾರಿ ‘ಮಾನವೀಯತೆಗಾಗಿ ಯೋಗ‘ ಎಂಬ ಧ್ಯೇಯ ದೊಂದಿಗೆ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ ಎಂದರು.

ಯೋಗ ಶಿಕ್ಷಕರಾದ ಈರಪ್ಪ ಕಾಡಪ್ಪನವರ ಅವರು ವಿದ್ಯಾರ್ಥಿಗಳಿಗೆ ಕಳೆದ ಒಂದು ತಿಂಗಳಿಂದ ಯೋಗವನ್ನು ಕಲಿಸಿ ಇಂದು ಸಹ ಸಾಮೂಹಿಕವಾಗಿ ಹತ್ತು ಹಲವಾರು ಆಸನಗಳನ್ನು  ವಿದ್ಯಾರ್ಥಿಗಳಿಗೆ ಆಗು ಮಾಡಿಸಿದರು, ಯೋಗ ನಮ್ಮ ಪೂರ್ವಜರು ನೀಡಿದ ಕೊಡುಗೆಯಾಗಿದ್ದು, ಅದನ್ನು ವಾಣಿಜ್ಯೀಕರಣ ಮಾಡಿಕೊಳ್ಳಬಾರದು’ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಇದೆ ಕಾರ್ಯಕ್ರಮದಲ್ಲಿ ಈರಣ್ಣ ಕಾಡಪ್ಪನವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆರ್.ಬಿ ಕಾಗಿನೆಲೆ ಹಾಗೂ ಸುಧಾ ಆರ್ ಶೆಟ್ಟಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಬಿ.ಎಮ್ ಸಾಲಿಮಠ ವಂದಿಸಿದರು.

ಎಸ್‌.ಬಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಎಸ್ ಜೆ ಎಮ್ ವಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಜಯಾ ಅಂಗಡಿ,  ಎಸ್ ಜೆ ಎಮ್ ವಿ ಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಶಿವಲೀಲಾ ವೈಜನಾಥ್ ಹಾಗೂ ಡಾ. ತಾಯಣ್ಣ ಎಚ್, ದೈಹಿಕ ಶಿಕ್ಷಕಿಯಾದ ಸುನಿತಾ ಬಟ್ಟೂರ, ಅಂಜಲಿ ಕರಬಸಪ್ಪನವರ, ರತ್ನಾ ಮರಿಬಾಶಟ್ಟಿ, ಸುವರ್ಣಾ ಭೂಸನೂರ, ಬಿ. ವಾಯ್‌. ನಾಗನಗೌಡರ ಹಾಗೂ ಎಸ್.ಜೆ.ಎಂ.ವಿ ಸಂಘದ ಸಮೂಹ ಸಂಸ್ಥೆಗಳ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/06/2022 05:31 pm

Cinque Terre

8.77 K

Cinque Terre

0

ಸಂಬಂಧಿತ ಸುದ್ದಿ