ನವಲಗುಂದ : ಮಂಗನ ಕಾಟಕ್ಕೆ ನವಲಗುಂದ ಪಟ್ಟಣದ ನೀರಾವರಿ ಕಾಲನಿಯಲ್ಲಿನ ನಿವಾಸಿಗಳು ಹಾಗೂ ಸಾರ್ವಜನಿಕರು ಹೈರಾಣಾಗಿದ್ದರು. ಇಂತಹ ಪುಂಡ ಮಂಗನನ್ನು ಪುರಸಭೆ ವತಿಯಿಂದ ಕಾರ್ಯಾಚಾರಣೆ ನಡೆಸಿ, ಬಲೆಗೆ ಬೀಳಿಸಿ, ಅರಣ್ಯಕ್ಕೆ ಕೊಂಡೋಯ್ಯಲಾಯಿತು.
ಹೌದು ಕೋತಿಗಳನ್ನು ಸೀರೆಹಿಡಿಯುವ ಬದಾಮಿ ತಾಲೂಕಿನ ಚೋಳಚಗುಡ್ಡ ಗ್ರಾಮದ ಈರಯ್ಯಸ್ವಾಮಿ ಸರಗಣಾಚಾರಿ ಎಂಬವವರನ್ನು ನವಲಗುಂದ ಪುರಸಭೆ ಅವರು ಕರೆಯಿಸಿ, ಮಂಗನನ್ನು ಸೆರೆ ಹಿಡಿದು, ಕಲಘಟಗಿ ಹತ್ತಿರವಿರುವ ಅರಣ್ಯಕ್ಕೆ ಬಿಡಲು ನಿರ್ಣಯಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಕಪಿರಾಯ ಕಳೆದ ವಾರದಿಂದ ಮಹಿಳೆಯರು ಸೇರಿ ಸುಮಾರು 15 ಜನರನ್ನು ಕಚ್ಚಿ-ಪರಚಿ ಗಾಯಗೊಳಿಸಿ, ರಾಜಾರೋಷವಾಗಿ ಎದುರಿಗೆ ಬಂದವರ ಮೇಲೆ ಹಲ್ಲೆ ಮಾಡುತ್ತಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತ ಸ್ಥಳೀಯರು ಪುರಸಭೆಗೆ ದೂರು ಸಹ ನೀಡಿದ್ದರು.
ಕಾರ್ಯಚರಣೆ ವೇಳೆ ಪುರಸಭೆ ಆರೋಗ್ಯ ನೀರಿಕ್ಷಕರಾದ ಸಾವಿತ್ರಿ ಮೊಶ್ಯಪನ್ನವರ, ಪುರಸಭೆ ಮಾಜಿ ಅಧ್ಯಕ್ಷ ಮಂಜು ಜಾಧವ, ಪ್ರವೀಣ ಅಗಸಿಮನಿ ಹಾಗೂ ಬದಾಮಿಯ ಕೋತಿ ಹಿಡಿಯುವ ತಂಡ ಹಾಗೂ ನಿವಾಸಿಗಳು ಇದ್ದರು.
Kshetra Samachara
05/06/2022 09:42 pm