ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ 6916 ಮೆಟ್ರಿಕ್ ಟನ್ ಡಿ.ಎ.ಪಿ ರಸಗೊಬ್ಬರ ಸೇರಿ ಒಟ್ಟು 20,800 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಲಭ್ಯವಿದೆ. ನಿನ್ನೆ ಮೇ 31 ಹಾಗೂ ಇಂದು ಜೂನ್ 1 ರಂದು ಜಿಲ್ಲೆಗೆ 3,890 ಮೆಟ್ರಿಕ್ ಟನ್ ಡಿ.ಎ.ಪಿ ಪೂರೈಕೆಯಾಗಿದೆ. ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಈಗಾಗಲೇ ರೆಕ್ ಪಾಯಿಂಟ್ ಹಾಗೂ ಗೋಡೌನ್‌ಗಳಿಂದ ರಸಗೊಬ್ಬರ ಬಂದಿದೆ. ಬೇಡಿಕೆಗೆ ಅನುಗುಣವಾಗಿ ಸಂಘಗಳಿಗೆ ಪೂರೈಕೆಯಾಗಲಿದೆ. ರೈತರು ಅವಶ್ಯಕತೆಗೆ ತಕ್ಕಂತೆ ಖರೀದಿಸಲು ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ. ಕೋರಿದ್ದಾರೆ.
Kshetra Samachara
02/06/2022 10:27 pm