ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ, ವಾಟರ್ ಬೋರ್ಡ್, ಕೆಯುಡಿಎಫ್‌ಸಿ ಹಾಗೂ ಎಲ್ & ಟಿ ಕಂಪೆನಿಯ ಅಧಿಕಾರಿಗಳೊಂದಿಗೆ ಮೇಯರ್ ಈರೇಶ ಅಂಚಟಗೇರಿ ಅವರು ಸಭೆ ನಡೆಸಿದರು.
ಧಾರವಾಡದ ಎಲ್ಲಾ ಬೋರ್‌ವೆಲ್‌ಗಳನ್ನು ಹತ್ತು ದಿನಗಳಲ್ಲಿ ರಿಪೇರಿ ಮಾಡಿ ಕಾರ್ಯ ನಿರ್ವಹಿಸಬೇಕು.
ಅವಳಿನಗರದ ಪಾಲಿಕೆ ಸದಸ್ಯರು, ಪಾಲಿಕೆ ಅಧಿಕಾರಿಗಳು ವಾಟರ್ ಬೋರ್ಡ್ ಕೆಯುಡಿಎಫ್‌ಸಿ ಅಧಿಕಾರಿಗಳು L&T company ಅಧಿಕಾರಿಗಳ ವಾಟ್ಸಪ್ ಗ್ರೂಪ್ ರಚನೆಯಾಗಿ ಯಾವುದೇ ವಾರ್ಡಿನಲ್ಲಿ ಉಂಟಾಗುವ ನೀರಿನ ಸಮಸ್ಯೆ ಶೀಘ್ರವಾಗಿ ಬಗೆಹರಿಸುವಂತಾಗಬೇಕು.
ಮಹಾನಗರ ಪಾಲಿಕೆ ಸದಸ್ಯರ ಮೊಬೈಲ್ ಸಂಖ್ಯೆಗಳನ್ನು ತಮ್ಮಲ್ಲಿ ಸಂಗ್ರಹಿಸಿ ಅವರ ಕರೆಗಳಿಗೆ ತುರ್ತಾಗಿ ಸ್ಪಂದಿಸಲು ಮೇಯರ್ ಅಂಚಟಗೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ & ಟಿ ಅಧಿಕಾರಿಗಳು ಅವಳಿನಗರದಲ್ಲಿ ಯಾವ ರೀತಿ ಕಾರ್ಯ ನಿರ್ವಹಣೆ ಮಾಡುತ್ತಾರೆ ಹಾಗೂ ಜನಸ್ಪಂದನ ಮಾಡುವ ವಿಧಾನಗಳನ್ನು ಹದಿನೈದು ದಿನಗಳಲ್ಲಿ ಪಾವರ್ ಪಾಯಿಂಟ್ ಪ್ರಸೆಂಟೇಶನ್ ನೀಡಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಎಂದರು.
Kshetra Samachara
30/05/2022 10:16 pm