ಹುಬ್ಬಳ್ಳಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 8 ಕುಸುಗಲ್ ರೇಲ್ವೆ ಸ್ಟೇಷನ್ ನಗರದಲ್ಲಿ ಮಳೆಯಿಂದ ಜಲಾವೃತಗೊಂಡು ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಇನ್ನೂ ಇಲ್ಲಿ ಸುಮಾರು ವರ್ಷಗಳಿಂದ ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವ ಜನರಿಗೆ, ಕುಸುಗಲ್ ಗ್ರಾಮ ಪಂಚಾಯತಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಈ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲವೆಂದು ಅಲ್ಲಿನ ನಿವಾಸಿಗಳು ಗರಂ ಆಗಿದ್ದಾರೆ.
ಕುಸಗಲ್ ಗ್ರಾಮದಲ್ಲಿ ಒಂದು ಸಣ್ಣ ಮಳೆಯಾದ್ರು ಕೂಡ, ಮನೆಗೆ ನೀರು ನುಗ್ಗುತ್ತದೆ. ಗ್ರಾಮ ಪಂಚಾಯತಿ ಅಧಿಕಾರಿಗಳು ಕಣ್ಮುಚ್ಚಿ ಕುಳ್ತಿದ್ದಾರೆ. ಕೂಡಲೆ ಸಂಬಂಧಿಸಿದ ಜನ ಪ್ರತಿನಿಧಿಗಳು ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಸಮಯನ್ನು ಬಗೆ ಹರಿಸಿ ಇಲ್ಲಿನ ಜನರಿಗೆ ಜೀವನ ನಡೆಸಲು ಅನುಕೂಲ ಮಾಡಿ ಕೊಡಬೇಕು...
Kshetra Samachara
21/05/2022 01:49 pm