ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಹಿಳಾ ಸ್ವಾಧಾರ ಗೃಹಕ್ಕೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಭೇಟಿ

ಧಾರವಾಡ: ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತಾ ಸಿ.ಎಂ‌‌. ಅವರು ಗುರುವಾರ ಯುವತಿಯರು ಹಾಗೂ ಮಹಿಳೆಯರು ಸ್ವಾಧಾರ ಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು‌.

ಹಾಜರಾತಿ ಪುಸ್ತಕದಲ್ಲಿ ಒಟ್ಟು 14 ಜನ ಮಹಿಳೆಯರ ಹೆಸರುಗಳು ನಮೂದು ಇದ್ದು ಆದರೆ ಭೌತಿಕವಾಗಿ (physically) ನಾಲ್ಕು ಜನ ಮಹಿಳೆಯರು ಮಾತ್ರ ತಂಗಿರುವುದು ಕಂಡುಬಂದಿತು. ಅಲ್ಲಿಯ ಮೇಲ್ವಿಚಾರಕರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಈ ಕುರಿತು ಪ್ರಾಧಿಕಾರಕ್ಕೆ ಪಾರದರ್ಶಕ ವರದಿ ನೀಡಲು ನಿರ್ದೇಶಿಸಿದರು.

ನಂತರ ಬಾಲನ್ಯಾಯ ಮಂಡಳಿಗೆ ಭೇಟಿ ನೀಡಿ ಮಕ್ಕಳ ರಕ್ಷಣಾ ಘಟಕದ ಸದಸ್ಯರೊಂದಿಗೆ ಚರ್ಚಿಸಿ ನೊಂದವರಿಗೆ ಉಚಿತ ಕಾನೂನು ನೆರವಿನ ಮಾಹಿತಿ ನೀಡಲು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

12/05/2022 10:23 pm

Cinque Terre

10.25 K

Cinque Terre

0

ಸಂಬಂಧಿತ ಸುದ್ದಿ