ಧಾರವಾಡ: ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಧಾರವಾಡ ಹಾಗೂ ಸಮಾಜ ಕಲ್ಯಾಣ ಇಲಾಖೆ ಯೋಜನೆ ಅಡಿಯಲ್ಲಿ ನಿರ್ಮಾಣವಾದ ಡಾ.ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಶಾಲಾ ಕೊಠಡಿಗಳನ್ನು ಶಾಸಕ ಅಮೃತ ದೇಸಾಯಿ ಅವರು ಶನಿವಾರ ಉದ್ಘಾಟಿಸಿದರು.
ಸೋಮಾಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ 2021-22 ನೇ ಸಾಲಿನ ಶೀರ್ಷಿಕೆ 3054 ರಾಜ್ಯ ಹೆದ್ದಾರಿ ನಿರ್ವಹಣೆ ಯೋಜನೆ ಅಡಿಯಲ್ಲಿ ಧಾರವಾಡ ತಾಲೂಕಿನ ಸೂಪಾ ಅಣ್ಣಿಗೇರಿ ರಾಜ್ಯ ಹೆದ್ದಾರಿ 28ರ ಕಿಮೀ 73 ರಿಂದ 84.72 ರವರಿಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕರು ಭೂಮಿಪೂಜೆ ಸಲ್ಲಿಸಿದರು.
ತಲವಾಯಿ ಗ್ರಾಮದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಧಾರವಾಡ ಅವರ ಅನುದಾನದಲ್ಲಿ ಧಾರವಾಡ ತಾಲೂಕಿನ ತಲವಾಯಿ-ಆಯಟ್ಟಿ ರಸ್ತೆಯಿಂದ ತಲೆಮೊರಬದವರೆಗೆ ರಸ್ತೆ ನಿರ್ಮಾಣ ಕಾಮಗಾರಿ, ತಲವಾಯಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆ ದುರಸ್ತಿ ಯೋಜನೆಯಡಿಯಲ್ಲಿ ಧಾರವಾಡ ತಾಲೂಕಿನ ಅಮ್ಮಿನಭಾವಿ ಶಿವಳ್ಳಿ ಜಿಲ್ಲಾ ಮುಖ್ಯರಸ್ತೆ ಕೀ.ಮಿ. 8:20 ರಿಂದ 9:20 ವರೆಗೆ ದುರಸ್ತಿ ಕಾಮಗಾರಿ ಭೂಮಿ ಪೂಜೆ, ಕವಲಗೆರಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಡಿ ಧಾರವಾಡ ತಾಲೂಕಿನ ಕವಲಗೇರಿ ಚಂದನಮಟ್ಟಿ ಜಿಲ್ಲಾ ಮುಖ್ಯ ರಸ್ತೆ ಕೀ.ಮೀ 1.90 ರಿಂದ ಕಿ ಮೀ 4.65 ರ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೂ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
Kshetra Samachara
07/05/2022 04:32 pm