ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಡ್ತಿ ನೀಡಲು ಶಿಕ್ಷಕರ ಒತ್ತಾಯ

ಧಾರವಾಡ: ಬೆಳಗಾವಿ ವಿಭಾಗ ಮಟ್ಟದ ಗ್ರಾಮೀಣ ಶಿಕ್ಷಕರ ಸಂಘದ ಸಂಚಾಲಕರಾಗಿರುವ ಅಕ್ಬರ್ ಅಲಿ ಸೋಲ್ಲಾಪುರ ಅವರ ನೇತೃತ್ವದ ತಂಡವು ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ, ಮುಖ್ಯ ಗುರುಗಳಿಗೆ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಿಗೆ, ಪದವಿಧರೇತರ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ನೀಡಬೇಕು ಹಾಗೂ ಎರಡು ವರ್ಷಗಳಿಂದಲೂ ಕುಂಠಿತಗೊಂಡಿರುವ ಬಡ್ತಿ ಈ ಕೂಡಲೇ ಪ್ರಾರಂಭಿಸುವಂತೆ ಆಗ್ರಹಿಸಿ ಧಾರವಾಡ ಡಿಡಿಪಿಐಗೆ ಮನವಿ ಸಲ್ಲಿಸಾಯಿತು.

24-03-2022 ರಂದು ಹುದ್ದೆಗಳು ನಾನ್ ಪ್ರಿಸಿಂಗ್ ಆಗಿದ್ದು ಖಾಲಿ ಹುದ್ದೆಗಳ ಪಟ್ಟಿ, ಸಿನಿಯಾರಿಟಿ ಪಟ್ಟಿ ತಯಾರಿಸಲು ಹಸಿರು ನಿಶಾನೆ ಸಿಕ್ಕoತಾಗಿದೆ ಆದ್ದರಿಂದ ಅತೀ ಶೀಘ್ರದಲ್ಲೇ ಅಂದರೆ ಏಪ್ರೀಲ್ 15ರ ಒಳಗಾಗಿ ಬಡ್ತಿಯ ಎಲ್ಲಾ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿ. ರಾಜ್ಯದಲ್ಲಿಯೇ ಧಾರವಾಡ ಜಿಲ್ಲೆಯು ಪ್ರಥಮವಾಗಿರುವಂತೆ ಬಡ್ತಿ ಪ್ರಕ್ರಿಯೆ ಈ ಕೂಡಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಲಾಯಿತು.

Edited By : PublicNext Desk
Kshetra Samachara

Kshetra Samachara

01/04/2022 10:25 pm

Cinque Terre

7.2 K

Cinque Terre

0

ಸಂಬಂಧಿತ ಸುದ್ದಿ