ಧಾರವಾಡ: ಧಾರವಾಡ ದುರ್ಗಾ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನವನಗರ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಧಾನಗುರು ಐ.ಐ.ಮುಲ್ಲಾನವರ, ಹೆಬ್ಬಳ್ಳಿಯ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಲ್.ಐ.ಲಕ್ಕಮ್ಮನವರ ಅವರು 6000 ರೂಪಾಯಿ ಮೌಲ್ಯದ ವಿವಿಧ ವಸ್ತುಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ವ್ಯಾಕ್ಯೂಮ್ ಕ್ಲೀನರ್, ಕಂಪ್ಯೂಟರ್ ಸ್ಪೀಕರ್ ಮತ್ತು ಮೌಸ್‌ನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ರೀತಿ ಶಾಲೆಗೆ ವಿವಿಧ ವಸ್ತುಗಳನ್ನು ಕೊಡುಗೆಯಾಗಿ ನೀಡಿದ ಶಿಕ್ಷಕರಿಗೆ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಹಾಗೂ ಶಾಲಾ ಪ್ರಧಾನಗುರುಗಳು, ಸಿಬ್ಬಂದಿ ವರ್ಗದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
Kshetra Samachara
01/04/2022 10:17 pm