ಹುಬ್ಬಳ್ಳಿ: ಮನೆಯೊಂದರಲ್ಲಿ ಆರು ಅಡಿ ಉದ್ದದ ಹಾವೊಂದು ಕಾಣಿಸಿಕೊಂಡು ಮನೆಯ ಮಂದಿಗೆಲ್ಲ ಭಯವನ್ನುಂಟು ಮಾಡಿರುವ ಘಟನೆ ನಗರದ ಮಂಟೂರ ರೋಡಿನ ಪಸ್ಟ್ ಮೈತ್ರಾನಗರದ ನಿವಾಸವೊಂದರಲ್ಲಿ ನಡೆದಿದೆ.
ಕೇರೆ ಹಾವು ಇದಾಗಿದ್ದು,ಸ್ಥಳೀಯರಲ್ಲಿ ಆತಂಕವನ್ನು ಹುಟ್ಟು ಹಾಕಿತ್ತು. ಸುದ್ದಿ ತಿಳಿಯುತ್ತಿದಂತೆಯೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿಡುವ ಮೂಲಕ ಸಾರ್ವಜನಿಕರ ಭಯವನ್ನು ದೂರ ಮಾಡಿದ್ದಾರೆ.
ಇನ್ನೂ ಬೇಸಿಗೆ ಸಮಯದಲ್ಲಿ ತಾಪಮಾನ ಹೆಚ್ಚಾದ ಕಾರಣ ಹಾವುಗಳು ಸರ್ವೇ ಸಾಮಾನ್ಯವಾಗಿ ಹೊರಬರುತ್ತವೆ ಎಂದು ಉರಗ ತಜ್ಞ ಮಾಹಿತಿ ನೀಡಿದರು.
Kshetra Samachara
26/03/2022 10:49 am