ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಗೆ ನೂತನ ಪದಾಧಿಕಾರಿಗಳ ನೇಮಕ

ಧಾರವಾಡ: ಧಾರವಾಡ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಗೆ 2022ರಿಂದ 2025 ರವರೆಗಿನ ಅವಧಿಗಾಗಿ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಉಪಾಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಸಿಇಓ ಡಾ.ಸುರೇಶ್ ಇಟ್ನಾಳ, ಚೇರಮೆನ್‌ರಾಗಿ ಮಹಾಂತೇಶ ವೀರಾಪೂರ, ವೈಸ್‌ಚೇರಮೆನ್‌ರಾಗಿ ಬಿ. ಆರ್.ಸಾರಥಿ, ಗೌರವ ಖಜಾಂಚಿಯಾಗಿ ಡಾ.ಎಸ್.ಜಿ.ಹಿರೇಮಠ, ಸದಸ್ಯ ಕಾರ್ಯದರ್ಶಿಯಾಗಿ ಡಾ. ಉಮೇಶ ಹಳ್ಳಿಕೇರಿ, ರಾಜ್ಯ ಕಾರ್ಯ ನಿರ್ವಾಹಕ ಸಮಿತಿ ಸದಸ್ಯರಾಗಿ ಶಂಕರ ಮುಗದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಆಡಳಿತ ಮಂಡಳಿಯ ಸದಸ್ಯರುಗಳನ್ನಾಗಿ ಡಾ.ಕವನ್ ದೇಶಪಾಂಡೆ, ಐ.ಎಸ್.ಗುಳಗಣ್ಣವರ, ಎ.ಎಲ್. ಗೊರೇಬಾಳ, ಮಲ್ಲಿಕಾರ್ಜುನ ಪಾಟೀಲ, ಡಾ.ಆರ್.ಎ.ಬಾಳಿಕಾಯಿ, ಡಾ.ಪ್ರಕಾಶ ಪವಾಡಶೆಟ್ಟರ, ಮಾರ್ತಾಂಡಪ್ಪ ಕತ್ತಿ, ಬಿ.ಆರ್.ಹೊಸಮನಿ, ಗೀತಾ ಎಸ್.ಮರಿಲಿಂಗಣ್ಣವರ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಶುಭ ಕೋರಿದರು.

Edited By : PublicNext Desk
Kshetra Samachara

Kshetra Samachara

21/03/2022 10:08 pm

Cinque Terre

6.53 K

Cinque Terre

0

ಸಂಬಂಧಿತ ಸುದ್ದಿ