ಧಾರವಾಡ: ಸಾಲಬಾಧೆಯಿಂದ ಇತ್ತೀಚೆಗೆ ನೇಣು ಹಾಕಿಕೊಂಡು ಕೋಟೂರು ಗ್ರಾಮದ ರೈತ ಕರೆಪ್ಪ ಮಾದರ ಅವರ ಮನೆಗೆ ಶಾಸಕ ಅಮೃತ ದೇಸಾಯಿ ಭೇಟಿ ನೀಡಿದರು.
ಬ್ಯಾಂಕಿನಲ್ಲಿ ಸಾಲ ಇದ್ದಿದ್ದರಿಂದ ಕರೆಪ್ಪನಿಗೆ ನೋಟಿಸ್ ಬಂದಿತ್ತು. ಇದರಿಂದ ಹೆದರಿ ಕರೆಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇಂದು ಅವರ ಮನೆಗೆ ಭೇಟಿ ನೀಡಿದ ಶಾಸಕರು, ಆತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಬರಬೇಕಾದ ಪರಿಹಾರವನ್ನು ಶೀಘ್ರವೇ ತಲುಪುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
Kshetra Samachara
20/03/2022 02:05 pm