ಹುಬ್ಬಳ್ಳಿ: ನಕಲಿ ಕಾಗದ ಪತ್ರಗಳನ್ನು ಪಡೆದು 5 ಲಕ್ಷ ರೂ. ವಂಚನೆ ಮಾಡಿದ್ದ ಪ್ರಕರಣದ ಹಿನ್ನೆಲೆಯಲ್ಲಿ, ಆರೋಪಿ ಮಧುರಾ ಕಾಲನಿ ಎಸ್‌ಬಿಐ ಹಿಂದಿನ ವ್ಯವಸ್ಥಾಪಕಿ ಸಂಧ್ಯಾ ಟಿ.ಸಿ. ಅವರನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೌದು,,, ಶಾಖೆಯ ಹಿಂದಿನ ವ್ಯವಸ್ಥಾಪಕಿ ಸಂಧ್ಯಾ ಟಿ.ಸಿ. ಅವರ 2019 ರಲ್ಲಿ ನಕಲಿ ಸಹಿ ಮಾಡಿದ ವೇತನ ಪ್ರಮಾಣ ಪತ್ರಗಳನ್ನು ಪಡೆದು ಸಾಲ ಮಂಜೂರು ಮಾಡಿದ್ದರು. ಸುಮಿತ್ರಾ ಕೊಂಡಪಲ್ಲಿ , ಲಕ್ಷ್ಮೀ ಯರಗುಂಟಿ , ವಿದ್ಯಾವತಿ ಹೊಲ್ಲೂರ , ಪರಮೇಶ್ವರಪ್ಪ ಮೇಲಿನಮನಿ , ಮೆರೆಪ್ಪ ಮಾದರ, ನಾಗಮ್ಮ ಕರೆಪ್ಪ ಮತ್ತು ಅಜಾಜ್ ಅಹ್ಮದ್ ಶೇಖ್ ಎಂಬುವರಿಗೆ ತಲಾ 5 ಲಕ್ಷ ರೂ.ನಂತೆ ಒಟ್ಟು 35 ಲಕ್ಷ ರೂ. ಸಾಲ ಮಂಜೂರು ಮಾಡಿದ್ದರು ಎಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಆರಂಭಿಸಿದ ಇನ್‌ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ ಆರೋಪಿಯನ್ನು ರವಿವಾರ ಹಾಸನದಲ್ಲಿ ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.
Kshetra Samachara
07/03/2022 01:56 pm