.ವರದಿ : ಮಹಾಂತೇಶ ಪಠಾಣಿ
ಅಳ್ನಾವರ : ತಾಲೂಕಿನ ಅಂಬೋಳ್ಳಿ ಗ್ರಾಮದ ಆರು ಜನ ರೈತರಿಗೆ ಭೂ ಕಬಳಿಸಿರುವ ಬೆಳಕಿಗೆ ಬಂದಿದೆ.
ಅನೇಕ ವರ್ಷಗಳಿಂದ ಜಮೀನು ಇದೇ ರೈತನ ಹೆಸರಿನಲ್ಲಿದೆ. ಇಷ್ಟೇ ಅಲ್ಲ 2018-2019 ರ ವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ನಂತರ ಉತಾರ ದಲ್ಲಿ ಆರು ಜನ ರೈತರ ಒಟ್ಟು ಮೂವತ್ತು ಗುಂಟೆ ಜಮೀನು ಮಾಯವಾಗಿದೆ.
ಇನ್ನು ಜಮೀನು ಕಳೆದುಕೊಂಡ ರೈತರೆಲ್ಲರು ಗಾಬರಿಯಿಂದ ಅಳ್ನಾವರ ತಹಶೀಲ್ದಾರ ಕಚೇರಿಗೆ ಸುತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸಹ ಸರಿಯಾದ ಮಾಹಿತಿ ನೀಡದೆ ಸತಾಯಿಸಿದ್ದಾರೆ ಎಂದು ರೈತರು ದೂರಿದ್ದಾರೆ.
ಕಳೆದ ಮೂರು ವರ್ಷದಿಂದ ಅಳ್ನಾವರ ಹಾಗೂ ಧಾರವಾಡದ ಕಚೇರಿಗಳಿಗೆ ಅಲೆದಾಟ ನಡೆಸುತ್ತಿರುವ ಈ ಅನ್ನದಾತರ ಸಂಕಷ್ಟಕ್ಕೆ ಕೊನೆಯೇ ಇಲ್ಲವಾಗಿದೆ. ಇನ್ನಾದರೂ ಅನ್ಯಾಯ ವಾದ ಈ ಎಲ್ಲ ರೈತರಿಗೆ ಭೂಮಿ ಹಿಂತಿರುಗಿಸಬೇಕು,ಕನಿಷ್ಠ ಪಕ್ಷ ನಷ್ಟ ತುಂಬಿಸಲು ಪರಿಹಾರವಾದರು ನೀಡಬೇಕು ಎನ್ನುವುದು ರೈತರ ಅಳಲಾಗಿದೆ.
Kshetra Samachara
16/02/2022 08:26 pm